ಟಿ.ಆರ್. ಶರವಣ ಕುಮಾರ್ ತಂಡಕ್ಕೆ ಭರ್ಜರಿ ಜಯ

sharavana kumar
Published on

ಕುಶಾಲನಗರ:

ಕುಶಾಲನಗರದ ಪ್ರತಿಷ್ಠಿತ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಶರವಣ ಕುಮಾರ್ ಸೇರಿದಂತೆ 11 ನಿರ್ದೇಶಕರು ಇವರ ತಂಡದಿAದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಎಂ.ಎA. ಚರಣ್ ನೇತೃತ್ವದ ಪರಿವರ್ತನಾ ತಂಡದಿAದ ಚರಣ್ ಸೇರಿ ಇಬ್ಬರು ಆಯ್ಕೆ ಆಗಿದ್ದಾರೆ.

ಟಿ.ಆರ್. ಶರವಣ ಕುಮಾರ್ ತಂಡದಿAದ ಶರವಣಕುಮಾರ್, ಕೆ.ಜಿ. ಮನು, ಪಿ.ಬಿ. ಯತೀಶ್, ಮಹಮ್ಮದ್ ಇಬ್ರಾಹಿಂ (ಟಿಲ್ಲು), ರಾಮಕೃಷ್ಣ, ಎಂ.ಎಸ್. ರಾಜೇಶ್, ಕವಿತಾ, ನೇತ್ರಾವತಿ, ವಿ.ಎಸ್. ಆನಂದಕುಮಾರ್, ಪ್ರಸನ್ನ, ಕೆ.ಎನ್. ದೇವರಾಜ್ ಆಯ್ಕೆ ಆಗಿದ್ದಾರೆ. ಭಾಸ್ಕರ್ ಗೌಡ ಮತ್ತು ಆನಂದ್‌ಕುಮಾರ್ ಅವರಿಗೆ ಸಮಾನ ಮತಗಳು ಬಂದ ಕಾರಣ ಚೀಟಿ ಮೂಲಕ ನಡೆದ ಆಯ್ಕೆಯಲ್ಲಿ ಆನಂದ್‌ಕುಮಾರ್ ಅವರಿಗೆ ವಿಜಯಲಕ್ಷಿö್ಮÃ ಒಲಿಯಿತು. ಇದೇ ತಂಡದ ಡಿ.ವಿ. ರಾಜೇಶ್ ಮತ್ತು ಮಧುಕುಮಾರ್ ಸೋಲು ಕಾಣಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net