

ಕುಶಾಲನಗರ:
ಕುಶಾಲನಗರದ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷÀರಾಗಿ ಟಿ.ಆರ್. ಶರವಣಕುಮಾರ್ ನಾಲ್ಕನೇ ಬಾರಿಗೆ ಆಯ್ಕೆ ಆಗಿದ್ದಾರೆ. ನೇತ್ರಾವತಿ ಮಂಜುನಾಥ್ ಅವರಿಗೆ ಉಪಾಧ್ಯಕ್ಷ ಸ್ಥಾನ ಒಲಿದು ಬಂದಿದೆ. ಶುಕ್ರವಾರ ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ.
ಅಧ್ಯಕ್ಷ ಸ್ಥಾನಕ್ಕೆ ಟಿ.ಆರ್. ಶರವಣ ಕುಮಾರ್ ಹೆಸರನ್ನು ಸದಸ್ಯ ಕೆ.ಎನ್. ದೇವರಾಜ್ ಸೂಚಿಸಿದರು. ಮತ್ತೊಬ್ಬ ಸದಸ್ಯ ಕೆ.ಜಿ. ಮನು ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನೇತ್ರಾವತಿ ಮಂಜುನಾಥ್ ಅವರ ಹೆಸರನ್ನು ಸದಸ್ಯ ಎಂ.ಎಸ್. ರಾಜೇಶ್ ಸೂಚಿಸಿದರೆ, ಸದಸ್ಯೆ ಪೊನ್ನಚ್ಚನ ಕವಿತಾ ಅನುಮೋದಿಸಿದರು.
ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಆದ ಬಗ್ಗೆ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟ ಸಹಕಾರ ಸಂಘಗಳ ಅಧಿಕಾರಿ ಸಂದೀಪ್ ಮಾಹಿತಿ ನೀಡಿದರು.
ಇತ್ತೀಚೆಗೆ ನಡೆದಿದ್ದ ಆಡಳಿತ ಮಂಡಳಿ ಚುನಾವಣೆಯಲ್ಲಿ ಟಿ.ಆರ್. ಶರವಣ ಕುಮಾರ್ ನೇತೃತ್ವದ ತಂಡದ 11 ಸದಸ್ಯರು ಆಯ್ಕೆಯಾಗಿದ್ದು, ಎದುರಾಳಿಗಳ ಗುಂಪಿನಿAದ 2 ಸದಸ್ಯರು ಆಯ್ಕೆಯಾಗಿದ್ದರು.
ಎದುರಾಳಿ ತಂಡದ ಸದಸ್ಯರು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.