ಸೋಲಿನಿಂದ ಕಾರ್ಯಕರ್ತರು ದೃತಿಗೆಡಬೇಕಿಲ್ಲ: ಸಲಗರ

c09a3471387b48c68cc36f1a6546261c
Published on

ಕಲಬುರಗಿ: ಬಿಜೆಪಿಗೆ ಸೋಲು ಮತ್ತು ಗೆಲುವು ಹೊಸದಲ್ಲ, ಈ ಬಾರಿಯ ವಿಧಾನ ಸಭೆ ಚುನಾವಣೆಯ ಫಲಿತಾಂಶದಿಂದ ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ ಎಂದು ಬಸವಕಲ್ಯಾಣ ಮತಕ್ಷೇತ್ರದಿಂದ ಸತತವಾಗಿ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಶರಣು ಸಲಗರ ಹೇಳಿದರು.

ಅವರು, ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ಅವರ ಕಲಬುರಗಿಯ ಮನೆಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಪಕ್ಷದ ಹಿನ್ನಡೆಯ ಬಗ್ಗೆ ಪಕ್ಷದ ಪ್ರಮುಖರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಶಾಸಕ ಶರಣು ಸಲಗರ ಅಭಿಪ್ರಾಯಪಟ್ಟರು.

ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಅಂಬಾರಾಯ ಅಷ್ಠಗಿ ಮಾತನಾಡಿ, ಎಲ್ಲ ಜಾತಿ- ಧರ್ಮದ ಜನರ ಬೆಂಬಲದೊಂದಿಗೆ ಪಕ್ಷವನ್ನು ಪುನಃ ಸಂಘಟಿಸುವ ಮೂಲಕ ಮತ್ತೆ ಪಕ್ಷವನ್ನು ಗತ ವೈಭವದ ಎಡೆಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡೋಣ ಎಂದು ಹೇಳಿದರು.
ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಪಕ್ಷ ಪುಟಿದೇಳುವ ಭರವಸೆಯನ್ನು ಡಾ ಅಂಬಾರಾಯ ಅಷ್ಠಗಿ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ್ ಕೋಟೆ, ಗುಲ್ಬರ್ಗಾ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ರಾಜಕುಮಾರ್ ಕಗ್ಗನಮಡಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಟಗಿ, ಬಿಜೆಪಿ ಯುವ ಮುಖಂಡರುಗಳಾದ ಪ್ರೊ. ಯಶವಂತರಾಯ ಅಷ್ಠಗಿ, ವೀರೇಶ ಪಾಟೀಲ್ ದಿನಸಿ, ಡಾ ಗುಂಡಪ್ಪ ಸಿಂಗೆ, ಸುನೀಲ್ ಕೋಟ್ರೆ, ನಾಗರಾಜ್ ಸಿರಸಗಿ, ಸೇರಿದಂತೆ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net