

ಸೊರಬ: ಹನ್ನೆರಡನೇ ಶತಮಾನದ ಶರಣ ಕ್ರಾಂತಿ ಜಗತ್ತಿನ ಮಹತ್ವದ ಚಳವಳಿ. ಶರಣರ ಮಾತುಗಳೇ ವಚನಗಳ ರೂಪತಾಳಿ ಸರ್ವ ಕಾಲಕ್ಕೂ ಮಾದರಿಯಾಗಿವೆ ಎಂದು ಉಪನ್ಯಾಸಕ ವಿಜಯಕುಮಾರ ದಟ್ಟೆರ್ ಅಭಿಪ್ರಾಯಪಟ್ಟರು.
ಪಟ್ಟಣದ ದೈವಜ್ಞ ಬ್ರಾಹ್ಮಣ ಸಮಾಜ, ಅಕ್ಕನ ಬಳಗ ಸೇವಾ ಟ್ರಸ್ಟ್ನಿಂದ ಸತ್ಯನಾರಾಯಣ ದೇವಾಲಯದಲ್ಲಿ ಸೋಮವಾರ ಆಯೋಜಿಸಿದ್ದ ವಚನ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ವಾಸ್ತವ ಬದುಕಿಗೆ ವಚನಗಳ ಅಗತ್ಯತೆ ವಿಷಯ ಕುರಿತು ಉಪನ್ಯಾಸÀ ನೀಡಿದರು.
ಆಧುನಿಕ ಜಗತ್ತಿನಲ್ಲಿ ಮನುಷ್ಯ ಮೌಲ್ಯಗಳನ್ನು ಮರೆತಿದ್ದಾನೆ. ರೀತಿ ನೀತಿಗಳು ಮರೆಯಾಗುತ್ತಿವೆ. ಸಂಬAಧಗಳಿಗೆ ಬೆಲೆ ಇಲ್ಲದಂತಾಗಿದೆ. ನೂರಾರು ಚಿಂತೆಗಳ ಹೊರೆಯಲ್ಲಿ ಮನುಷ್ಯ ನೆಮ್ಮದಿ ಕಳೆದುಕೊಂಡಿದ್ದಾನೆ. ಆಸೆ ಆಮಿಷಗಳ ತಾಕಲಾಟದಲ್ಲಿ ಆದರ್ಶಗಳ ಪಾಲನೆ ಮಾಡುತ್ತಿಲ್ಲ. ಈ ಎಲ್ಲ ಜ್ವಲಂತ ಸಮಸ್ಯೆಗಳ ಪರಿಹಾರವಾಗಿ ಶರಣರ ವಚನಗಳು ದಾರಿದೀಪ ಆಗಬಲ್ಲವು ಎಂದರು.
ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಸ್ವಾಮೀಜಿ ಮಾತನಾಡಿ, ಶರಣರ ಬದುಕು ಒಂದು ಪವಾಡ. ಅವರ ಮಾತುಗಳೇ ವಚನಗಳು. ಪಾಲನೆಯಿಂದ ಬದುಕಿಗೆ ಶಾಂತಿ, ನೆಮ್ಮದಿ ತರಬಲ್ಲವುÄ. ಕೇವಲ ಆಡಂಬರದ ಪೂಜೆ ದೇವರ ಒಲುಮೆಗೆ ಪಥವಾಗಲಾರದು. ಅಂತರAಗದ ಪೂಜೆಗೆ ಭಕ್ತಿ ಮುಖ್ಯ ಎಂಬುದು ಶರಣರ ಅಭಿಪ್ರಾಯ. ಆದ್ದರಿಂದ ಎಲ್ಲರೂ ವಚನಗಳ ಅಂತರAಗ ಆಚರಣೆಗಳನ್ನು ಅನುಸರಿಸಬೇಕೆಂದು ಸಲಹೆ ನೀಡಿದರು.
ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ಪ್ರಶಾಂತ, ಜಯಮಾಲಾ, ದೈವಜ್ಞ ಬ್ರಾಹ್ಮಣ ಸಮಾಜದ ಪದಾಽಕಾರಿಗಳು, ಮಠದ ಭಕ್ತರುÀ ಇದ್ದರು.