ಸಮಾಜ ಅಭಿವೃದ್ಧಿಗೆ ಶರಣರ ಕೊಡುಗೆ ಅಪಾರ

Untitled design (10)
ಸಂಡೂರು ತಾಲೂಕಿನ ಕೃಷ್ಣಾನಗರದ ಆದರ್ಶ ವಿದ್ಯಾಲಯದಲ್ಲಿ ಶಸಾಪ ತಾಲೂಕು ಘಟಕ ಮಂಗಳವಾರ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶ್ರೀ ಪ್ರಭು ಸ್ವಾಮೀಜಿ ಬಹುಮಾನ ವಿತರಿಸಿದರು. ತಾಲೂಕು ಘಟಕದ ಅಧ್ಯಕ್ಷ ಬಿ.ನಾಗನಗೌಡ, ಮುಖ್ಯ ಶಿಕ್ಷಕ ಚಂದ್ರಶೇಖರ್, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ನೀಲಾಂಭಿಕಾ ಇದ್ದರು.
Published on

ಸಂಡೂರು: ಸಮಾಜ ಅಭಿವೃದ್ಧಿಗೆ ಬಸವಾದಿ ಶರಣರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಬನ್ನಿಹಟ್ಟಿ ಪ್ರೌಢಶಾಲೆಯ ಶಿಕ್ಷಕ ಜಿ.ಎಂ.ಪ್ರದೀಪ್ ಕುಮಾರ್ ಹೇಳಿದರು.


ತಾಲೂಕಿನ ಕೃಷ್ಣಾನಗರದ ಆದರ್ಶ ವಿದ್ಯಾಲಯದಲ್ಲಿ ಶಸಾಪ ತಾಲೂಕು ಘಟಕ ವಚನ ದಿನಾಚರಣೆ ನಿಮಿತ್ತ ಮಂಗಳವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮನುಕುಲದ ಉನ್ನತಿಗೆ ಅಗತ್ಯವಿರುವ ಚಿಂತನೆ ಹಾಗೂ ಪರಿಹಾರಗಳನ್ನು ಬಸವಾದಿ ಶರಣರು ವಚನ ಮೂಲಕ ತಿಳಿಸಿದ್ದಾರೆ. ಅವರು ಕಾಯಕ ಮತ್ತು ದಾಸೋಹ ತತ್ವದಲ್ಲಿ ನಂಬಿಕೆಯಿಟ್ಟು ಸರಳ ಜೀವನ ನಡೆಸಿದ್ದಾರೆ. ವಚನ ಸಾಹಿತ್ಯದ ಮಹತ್ವ ಸಮಾಜಕ್ಕೆ ತಿಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಎಂದರು.


ಶಸಾಪ ತಾಲೂಕು ಘಟಕದ ಅಧ್ಯಕ್ಷ ಬಿ.ನಾಗನಗೌಡ ಮಾತನಾಡಿ, ಹೃದಯವಂತಿಕೆ ನೀಡುವ ವಚನ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಯೆ, ಕರುಣೆ, ಅಹಿಂಸೆ, ಸತ್ಯ, ಸಂಸ್ಕಾರ ಮೊದಲಾದ ಮಾನವೀಯ ಮೌಲ್ಯಗಳನ್ನು ಶರಣರು ಹುಟ್ಟು ಹಾಕಿದ್ದಾರೆ ಎಂದು ತಿಳಿಸಿದರು.


ವಿರಕ್ತಮಠದ ಶ್ರೀ ಪ್ರಭು ಸ್ವಾಮೀಜಿ, ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಶೆಟ್ಟಿ, ಮುಖ್ಯಶಿಕ್ಷಕ ಚಂದ್ರಶೇಖರ್, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ನೀಲಾಂಭಿಕಾ ಮಾತನಾಡಿದರು. ವಚನ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಶಸಾಪ ಸದಸ್ಯ ಎ.ಎಂ.ಶಿವಮೂರ್ತಿಸ್ವಾಮಿ, ತಾಲೂಕು ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ಗುಟ್ಟೆ ನಳಿನ, ನಿವೃತ್ತ ಮುಖ್ಯಶಿಕ್ಷಕ ಮೃತ್ಯುಂಜಯ, ಪ್ರಮುಖರಾದ ಸಾವಿತ್ರಮ್ಮ, ಎಸ್.ಡಿ.ಪ್ರೇಮಲೀಲಾ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net