ಶರಣರು ಬಹುದೊಡ್ಡ ದಾರ್ಶನಿಕರು

16GKK1
Published on

ಗೋಕಾಕ: ಸಾಧನೆಯಿಂದ ಮಾತ್ರ ಪರಮಜ್ಞಾನ ಪ್ರಾಪ್ತವಾಗುತ್ತದೆ ಎಂದು ಗೋಕಾಕದ ಶೂನ್ಯ ಸಂಪಾದನ ಮಠದ ಪೀಠಾಥಿಪತಿ ಮುರುರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದ ಶೂನ್ಯ ಸಂಪಾದನ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಮತ್ತು ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 182ನೇ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಸ್ತುತ ಸನ್ನಿವೇಶದಲ್ಲಿ ನಡೆಯುತ್ತಿರುವ ಟನೆಗಳನ್ನು 12ನೇ ಶತಮಾನದ ಶರಣರು ಉಲ್ಲೇಖಿಸಿದ್ದಾರೆ. ಲಿಂಗಾಂಗ ಸಾಮರಸ್ಯ ಸಾಧಿಸಿದ್ದ ಶರಣರು ತ್ರಿಕಾಲ ಜ್ಞಾನಿಗಳಾಗಿದ್ದರು. ಅವರು ಭೂತ, ವರ್ತಮಾನ, ಭವಿಷ್ಯವನ್ನು ನಿಖರವಾಗಿ ನುಡಿದಿದ್ದಾರೆ ಎಂದರು.

ಹಾವೇರಿ ತಪೋನಿಧಿ ಮದ್ಘನಲಿಂಗ ಚಕ್ರವರ್ತಿ ಬಸವ ಶಾಂತ ವೀರ ಪಟ್ಟಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸನಗೌಡ ಪಾಟೀಲ ಅಧ್ಯತೆ ವಹಿಸಿದ್ದರು. ಶೆಲಾ ಬಿದರಿ, ದಾಸೋಹಿಗಳಾದ ವೀಣಾ ಸದಾನಂದ ಹಿರೇಮಠ, ಮಹಾದೇವಿ ದುಂಡಪ್ಪ ಕಿರಗಿ, ಮಹಾಲಿಂಗಪ್ಪ ನೇಗಿನಹಾಳ, ದುಂಡಪ್ಪಣ್ಣ ಮಗದುಮ್ಮ, ಎಸ್​. ಕೆ. ಮಠದ, ಆರ್​. ಎಲ್​. ಮಿರ್ಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net