

ನರಗುಂದ: ಪಟ್ಟಣದ ಸೋಮಾಪುರ ಬಡಾವಣೆಯ ಶ್ರೀನಾಗಲಿಂಗ ನಿಲಯದಲ್ಲಿ ಅ.3ರಿಂದ ಅ.12ರವರೆಗೆ 98ನೇ ಶರನ್ನವರಾತ್ರಿ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಅ.3 ರಂದು ಬೆಳಗ್ಗೆ 6ಗಂಟೆಗೆ ಪ್ರಣವ ಧ್ವಜಾರೋಹಣ ಹಾಗೂ ಶಿವಮಹಿಮ ಸ್ತೋತ್ರದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಹುಬ್ಬಳ್ಳಿಯ ಸೋಮಚಾರ್ಯ ಕಡ್ಲಾಸ್ಕರ್ ಅವರಿಂದ ಪೂಜಾ ಕಾರ್ಯಕ್ರಮ ಜರುಗುವುದು. ಬೆಳಗ್ಗೆ 9 ಗಂಟೆಗೆ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮೀಜಿಗಳಿಂದ ಪಾದಪೂಜೆ ನಡೆಯಲಿದೆ. ಅ.4, 5ರಂದು ದೇವಿ ಪುರಾಣ, ಪ್ರವಚನ, ಉಪನ್ಯಾಸ, ಭಕ್ತಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
6ರಂದು ಬೆಳಿಗ್ಗೆ ನವಗ್ರಹ ಹೋಮ, ಗಣಹೋಮ, ದುರ್ಗಾಹೋಮ ನೆರವೇರುವುದು. 7ರಂದು ಪ್ರವಚನ, ಉಪನ್ಯಾಸ, ಭಕ್ತಿ ಸಂಗಿತ ಕಾರ್ಯಕ್ರಮ. 10ರಂದು ಬೆಳಗ್ಗೆ 11ಗಂಟೆಗೆ ಶ್ರೀಗುರು ಹನುಮಾರೂಢ ಶ್ರೀಗಳ ಪಾದಪೂಜೆ, ಧರ್ಮಸಭೆ ನಡೆಯಲಿದೆ. ಈ ವೇಳೆ ಕಗಧಾಳ ಸಿದ್ಧಾರೂಢ ಹಾಗೂ ವಿವಿಧ ಗ್ರಾಮಗಳ ಭಕ್ತರು ಆಗಮಿಸಲಿದ್ದಾರೆ. ಧರ್ಮ ಸಭೆಯಲ್ಲಿ ರೋಣದ ಗುರುಪಾದ ಸ್ವಾಮೀಜಿಗಳು, ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಪತ್ರಿವನಮಠದ ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು, ವಿರಕ್ತಮಠದ ಶಿವಕುಮಾರ ಶ್ರೀಗಳು, ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿಗಳು, ಶ್ರೀಕಂಠ ಸ್ವಾಮೀಜಿಗಳು, ಬನಹಟ್ಟಿ ಸೊಲಬಯ್ಯ ಸ್ವಾಮೀಜಿಗಳು, ವೀರಭದ್ರ ಸ್ವಾಮೀಜಿಗಳು, ವೆಂಕರಡ್ಡಿ ಹೂಲಿ, ಇತರರು ಭಾಗವಹಿಸುವರು.
ಅ.3 ರಿಂದ ಮೌನೇಶ ಜಯದೇವ ಪತ್ತಾರ ಅವರಿಂದ ಪ್ರತಿದಿನ ಶ್ರೀದೇವಿ ಪುರಾಣ, ಚಂದ್ರಕಾಂತ ಇನಾಮದಾರ, ಶ್ರೀನಿವಾಸ ಇನಾಮದಾರ, ಸಾಗರ ಬಡಿಗೇರ, ಉಜ್ವಲ ಕೆರೂರ ಅವರಿಂದ ಸಂಗೀತ ಸೇವೆ ಜರುಗಲಿದೆ. ಶ್ರೇಯಾ ಪತ್ತಾರ ತಂಡದವರಿಂದ ಭರತನಾಟ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.11ರಂದು ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಆಯುಧ ಪೂಜೆ. ಅ.12ರಂದು ಬಾಲ ನವ ಕನ್ನಿಕೆಯರಿಗೆ ಉಡಿ ತುಂಬುವುದು ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ ಎಂದು ರಾಜು ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.