ಶರನ್ನವರಾತ್ರಿ ಉತ್ಸವ ಇಂದಿನಿಂದ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಯಾಲಕ್ಕಿಶೆಟ್ಟರ್​ ಕಾಲನಿ ಶಂಕರಪುರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಅ. 3ರಿಂದ ಅ. 12ರವರೆಗೆ ಶರನ್ನವರಾತ್ರಿ ಉತ್ಸವ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ. 3ರಂದು ಸಂಜೆ 6 ಗಂಟೆಗೆ ಡಾ. ಎಸ್​.ಆರ್​. ಹೆಬ್ಬಾಳ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಯಾಗಿ ಅನಂದ ಥಿಟೆ, ವಿಠ್ಠಲ ನಾರಾಯಣ ಶೆಟ್ಟಿ, ಇತರರು ಆಗಮಿಸಲಿದ್ದಾರೆ. ನಂತರ ವೈಷ್ಣವಿ ಶೆಟ್ಟಿ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ. ನಿತ್ಯ ಬೆಳಗ್ಗೆ ಶಾರದಾ ದೇವಿಗೆ ಮಹಾಭಿಷೇಕ ನಡೆಸಿ, ವಿವಿಧ ಅಲಂಕಾರ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net