ಅ.3ರಿಂದ 12ರವರೆಗೆ ಶರನ್ನವರಾತ್ರಿ ಉತ್ಸವ

Published on

ಸೋಮವಾರಪೇಟೆ: ಶ್ರೀ ಸೋಮೇಶ್ವರ ದೇವಾಲಯದಲ್ಲಿ 17ನೇ ಶರನ್ನವರಾತ್ರಿ ಉತ್ಸವ ಅ.3ರಿಂದ 12ರವರೆಗೆ ನಡೆಸಲಾಗುವುದು ಎಂದು ದೇವಾಲಯ ಸಮಿತಿ ಉಪಾಧ್ಯಕ್ಷ ಎಸ್.ಆರ್.ಸೋಮೇಶ್ ತಿಳಿಸಿದರು.

ಅ.3ರಂದು ಬೆಳಗ್ಗೆ 7ಕ್ಕೆ ಶ್ರೀ ದೇವಿ ಪಾರ್ವತಿ ವಿಗ್ರಹವನ್ನು ಆನೆಕೆರೆಯಲ್ಲಿ ಗಂಗೆ ಪೂಜೆಯ ನಂತರ ದೇವಾಲಯಕ್ಕೆ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

4 ರಂದು ಹರಿದ್ರಾಲಂಕಾರ, 5ರಂದು ಕುಂಕುಮಾಲಂಕಾರ, 6ರಂದು ಗಂಧದ ಅಲಂಕಾರ, 7ರಂದು ಮುತ್ತಿನ ಅಲಂಕಾರ ಮಾಡಲಾಗುವುದು. 9ರಂದು ಬೆಳಿಗ್ಗೆ 8-30 ರಿಂದ 10 ರವರೆಗೆ ಸರಸ್ವತಿ ಪೂಜೆ ಹಾಗೂ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಗುವುದು. ಪಾರ್ವತಿ ದೇವಿಗೆ ಮಲ್ಲಿಗೆ ಮೊಗ್ಗಿನ ಅಲಂಕಾರ, 10 ರಂದು ಬೆಳಗ್ಗೆ 7ರಿಂದ ವಿಶೇಷ ಪ್ರಜೆ, 9 ಗಂಟೆಯಿಂದ ದುರ್ಗಾ ಹೋಮ ನಡೆಯುವುದು. ಪಾರ್ವತಿ ದೇವಿಗೆ ದುರ್ಗಾ ಅಲಂಕಾರ, 11ರಂದು ದಾಳಿಂಬೆ ಅಲಂಕಾರ ಮಾಡಲಾಗುವುದು ಎಂದು ಹೇಳಿದರು.

12ರಂದು ದಶಮಿ ಪ್ರಯುಕ್ತ ಬೆಳಗ್ಗೆ 10-45ಕ್ಕೆ ದೇವಿಯ ಸಡಿಲಿಕೆ ನಂತರ ಸೌಲಕ್ಕಿ ಕಾರ್ಯಕ್ರಮ ನಡೆಯುತ್ತದೆ. ಮಧ್ಯಾಹ್ನ 2 ಗಂಟೆಗೆ ದೇವಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯೋಗದಲ್ಲಿ ಡೊಳ್ಳು ಕುಣಿತ, ಪೂಜಾ ಕುಣಿತ ಹಾಗೂ ವೀರಗಾಸೆ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯ ನಂತರ ಆನೆಕೆರೆಯ ಬಳಿ ಸ್ನೇಹಧ್ಯೋತಕವಾಗಿ ಬನ್ನಿ ಹಚ್ಚಿ ಉತ್ಸವ ಮೂರ್ತಿಯನ್ನು ಆನೆಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿಯ ದಿನೇಶ್ ಹಾಲೇರಿ, ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net