ಶರನ್ನವರಾತ್ರಿ ಉತ್ಸವ 15ರಿಂದ

13 Dwd 6
Published on

ಧಾರವಾಡ: ನಗರದ ಕೆಲಗೇರಿ ರಸ್ತೆಯಲ್ಲಿರುವ ಶಾಂತಿನಿಕೇತನ ನಗರದ ಅಽದೇವತೆ, ತ್ರಿಗುಣಾತ್ಮಕ ಸ್ವರೂಪಳಾದ ಜಾಗೃತಿ ಶ್ರೀ ಕರಿಯಮ್ಮದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವನ್ನು ಅ. 15ರಿಂದ 24ರವರೆಗೆ ಆಯೋಜಿಸಲಾಗಿದೆ.
15ರಿಂದ 24ರವರೆಗೆ ದೇವಿಗೆ ವಿವಿಧ ಅಲಂಕಾರ ಮಾಡಲಾಗುವುದು. ೨೪ರಂದು ಸಂಜೆ 4.30 ಗಂಟೆಗೆ ದೇವಿಯ ಅಲಂಕೃತ ಪಲ್ಲಕ್ಕಿ ಉತ್ಸವವು ನಡೆದು, ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಮುಡಿಯಲಾಗುವುದು. ಪ್ರತಿದಿನ ಬೆಳಗ್ಗೆ 5.30ಕ್ಕೆ ಕಾಕಡಾರತಿ, 9.30ಕ್ಕೆ ಮಂಗಳಾರತಿ, ಸಂಜೆ 6.30ಕ್ಕೆ ಭಜನೆ, ರಾತ್ರಿ 8.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. 21ರಂದು ಸಂಜೆ 4.30 ಗಂಟೆಗೆ ಸುಮಂಗಲೆಯರಿ0ದ ಕುಂಕುಮಾರ್ಚನೆ ನಡೆಯಲಿದೆ. ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದವನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎನ್.ಎಚ್. ಕೋನರಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net