

ಗಜೇಂದ್ರಗಡ: ಶ್ರೀ ಮಹಾದಾಸೋಹಿ, ಬರಗಾಲದಬಂಟ ಶ್ರೀ ಶರಣಬಸವೇಶ್ವರ ಪುರಾಣದ ಮಂಗಲೋತ್ಸವ ಅಂಗವಾಗಿ ಶುಕ್ರವಾರ ಮೈಸೂರು ಮಠದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಗಜೇಂದ್ರಗಡ ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಮಾತನಾಡಿ, ಸೆ.16ರಂದು ಬೆಳಿಗ್ಗೆ 9 ಗಂಟೆಗೆ ಶರಣಬಸವೇಶ್ವರ ಭಾವಚಿತ್ರದ ಮೆರವಣಿಗೆ ಮೈಸೂರು ಮಠದಿಂದ ಪ್ರಾರಂಭವಾಗಿ ವಿವಿಧ ವಾದ್ಯ ಮೇಳಗಳೊಂದಿಗೆ ಬಸವೇಶ್ವರ ಸರ್ಕಲ್, ಕಮ್ಮಾರ ಸಾಲ, ಕೊಳ್ಳಿಯವರ ಕ್ರಾಸ್, ಕಟ್ಟಿಬಸವೇಶ್ವರ ರಂಗಮಂದಿರ, ಹಿರೇಬಜಾರ ಅಗಸಿಬಾಗಿಲಿನಿಂದ ಮರಳಿ ಮೈಸೂರು ಮಠಕ್ಕೆ ಆಗಮಿಸುವುದು. ಮಧ್ಯಾಹ್ನ 1.30 ಗಂಟೆಗೆ ಮೈಸೂರು ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ, ಪ್ರಸಾದ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.
ಸಮಾಜದ ಕಾರ್ಯದರ್ಶಿ ಎ.ಪಿ. ಗಾಣಿಗೇರ ಮಾತನಾಡಿ, ಪುರಾಣ ಮಹಾಮಂಗಲೋತ್ಸವದ ಸಾನ್ನಿಧ್ಯವನ್ನು ಮೈಸೂರು ಮಠದ ವಿಜಯಮಹಾಂತ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯರು, ನಿಡಗುಂದಿಕೊಪ್ಪದ ಚನ್ನಬಸವ ಸ್ವಾಮೀಜಿ ವಹಿಸುವರು. ಉದ್ಘಾಟನೆಯನ್ನು ಶಾಸಕ ಜಿ.ಎಸ್. ಪಾಟೀಲ ನೆರವೇರಿಸುವರು.
ಅಧ್ಯಕ್ಷತೆಯನ್ನು ಸಿದ್ದಣ್ಣ ಬಂಡಿ ವಹಿಸುವರು, ಪುರಾಣ ಸಮಿತಿ ಅಧ್ಯಕ್ಷ ಶಿವಕುಮಾರ ಕೋರಧಾನ್ಯಮಠ, ಗಜೇಂದ್ರಗಡ ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಪುರಾಣ ಪ್ರವಚನಕಾರರಾದ ಕುಮಾರ ಶಾಸ್ತ್ರೀಗಳು ಹಿರೇಮಠ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಎಂದರು.
ಸಮಾಜದ ಉಪಾಧ್ಯಕ್ಷ ಪ್ರಭು ಚವಡಿ, ಎಸ್.ಎಸ್. ವಾಲಿ, ಶರಣಪ್ಪ ರೇವಡಿ, ಬಸವರಾಜ ಕೊಟಗಿ, ಪ್ರಭು ಹಿರೇಮಠ, ನಾಗಯ್ಯ ಗೊಂಗಡಶೆಟ್ಟಿಮಠ, ಬಸವರಾಜ ಚನ್ನಿ, ಶಿವಯ್ಯ ಚಕ್ಕಡಿಮಠ, ಪ್ರಕಾಶ ಕಾರಡಗಿಮಠ, ವೀರಯ್ಯ ಕಲ್ಮಂಗಿಮಠ, ಮಲ್ಲು ಶಾಸ್ತ್ರೀ, ಮಹಾದೇವಪ್ಪ ಪವಾರ ಶ್ರೀಕಾಂತ ತಾಳಿಕೋಟಿ ಇತರರಿದ್ದರು.