ಶರಣಬಸವೇಶ್ವರ ಪುರಾಣ ಮಂಗಲ ಅದ್ದೂರಿ

Untitled design(1)
ಕವಲೂರು ಗ್ರಾಮದ ಶರಣಬಸವೇಶ್ವರ ದೇವಸ್ಥಾನ.
Published on

ಅಳವಂಡಿ: ಕವಲೂರು ಗ್ರಾಮದಲ್ಲಿ ಶರಣಬಸವೇಶ್ವರ ಪುರಾಣ ಮಂಗಲ ಕಾರ್ಯ ಸೋಮವಾರ ಅದ್ದೂರಿಯಿಂದ ನಡೆಯಿತು.

ಬೆಳಗ್ಗೆ ಶರಣಬಸವೇಶ್ವರ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಯಿತು. ಭಜನಾ ಮಂಗಲದ ಅಂಗವಾಗಿ ದೇವಸ್ಥಾನವನ್ನು ತಳಿರು, ತೋರಣ, ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಅಡ್ಡಪಲ್ಲಕ್ಕಿಯನ್ನು ವಿವಿಧ ಹೂ ಹಾಗೂ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗಿತ್ತು. ಗ್ರಾಮದ ಗೌಡರ ಕಿಲ್ಲೆ(ವಾಡೆ)ಯಿಂದ ಶರಣಬಸವೇಶ್ವರ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ನಂತರ ಅಡ್ಡಪಲ್ಲಕ್ಕಿಯಲ್ಲಿ ಶರಣ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪಿಸಿ, ಮಹಿಳೆಯರ ಕಳಸ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಅನ್ನ ದಾಸೋಹ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಸೋಮಯ್ಯ ಲಿಂಬಿಕಾಯಿಮಠ, ವಿರುಪಾಕ್ಷಗೌಡ್ರ, ರಮೇಶ ರಾಟಿಮನಿ, ಮುತ್ತಯ್ಯ ಲಿಂಬಿಕಾಯಿಮಠ, ಶರಣಯ್ಯ ಕಂತೆಯ್ಯನಮಠ, ಶರಣಪ್ಪ ಹಡಪದ, ಅಶೋಕ ಅಡವಳ್ಳಿ, ಅಲ್ಲಸಾಬ, ಮಹಾಂತೇಶ ಸಿಂದೋಗಿ, ಮುತ್ತಣ್ಣ ಬಾರಕೇರ, ಸೂಗುರೆಪ್ಪ, ತಿಮ್ಮಣ್ಣ ಸಿದ್ನೆಕೊಪ್ಪ, ತೋಟಯ್ಯ, ಸುರೇಶ, ಹನುಮಪ್ಪ, ಬಸವರಾಜ, ಶಿವು ಕುರಿ, ರವಿ ಬಾರಕೇರ, ಮಂಜು, ಬೀಮಪ್ಪ, ಹರೀಶ, ಮಾರುತಿ ತಳಕಲ್, ಶಿವಣ್ಣ, ಶೇಖಪ್ಪ, ಕರಿಯಪ್ಪ, ಪಕೀರಶೆಟ್ಟಿ, ಕರಿಯಪ್ಪ, ಸುರೇಶ, ಮಾರುತೆಪ್ಪ, ನಾಗಯ್ಯ, ಚಂದ್ರಪ್ಪ, ಬಸಪ್ಪ, ಮಲ್ಲಪ್ಪ ಹಾಗೂ ಭಜನಾ ಸಂಘದ ಸದಸ್ಯರು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net