

ಸೋಮವಾರಪೇಟೆ: ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ತಂದು ದೇವಾಲಯದಲ್ಲಿ ಸೋಮವಾರ ಪ್ರತಿಷ್ಠಾಪಿಸಲಾಯಿತು.
ಸಂಜೆ ದೇವಿಗೆ ಹರಿದ್ರಾಲಂಕಾರ ಮಾಡುವುದರೊಂದಿಗೆ ಲಲಿತ ಸಹಸ್ರನಾಮ, ಕುಂಕುಮಾರ್ಚನೆ, ರಂಗಪೂಜೆ ಹಾಗೂ ಮಹಾಮಂಗಳಾರತಿ ಅರ್ಚಕ ಚಿತ್ರಕುಮಾರ್ ಭಟ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ನಂದಕುಮಾರ್, ಪದಾಧಿಕಾರಿಗಳಾದ ಸೋಮೇಶ್, ರಾಮ್‌ಪ್ರಸಾದ್, ಮದುಸೂದನ್, ಶ್ರೀಕಾಂತ್ ಸೇರಿದಂತೆ ಸಮಾಜ ಬಾಂಧವರು ಇದ್ದರು.