ಶೃಂಗೇರಿ ಮಠದಲ್ಲಿ ಶರನ್ನವರಾತ್ರೋತ್ಸವ

Sharanavarathotsava at Sringeri Math
Published on

ವಿಜಯಪುರ : ಇಲ್ಲಿನ ವಜ್ರಹನುಮಾನ ನಗರ ಬಡಾವಣೆಯಲ್ಲಿರುವ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಸೆ. 22 ರಿಂದ ಅ. 2 ರವರೆಗೆ ಶ್ರೀ ಶಾರದಾ ಶರನ್ನವರಾತ್ರೋತ್ಸವ ಕಾರ್ಯಕ್ರಮ ನಡೆಯಲಿದೆ.ಸೆ. 22 ರಂದು ಶಾರದಾ ಶರನ್ನವರಾತ್ರೋತ್ಸವದ ಪ್ರಾರಂಭದ ದಿನ ಬೆಳಗ್ಗೆ 8 ರಿಂದ ವಿಶೇಷ ಪೂಜೆ, ಅಲಂಕಾರ, ಪುಣ್ಯಾಹವಾಚನ, ದೀಪಸ್ಥಾಪನೆ, ಸಪ್ತಶತಿಪಾರಾಯಣ, ನಮ: ಶಂಕರಾಯ ಹಾಗೂ ರಾಮತಾರಕ ಜಪಯಜ್ಞ, ಸೆ. 23 ರಂದು ಬೆಳಗ್ಗೆ 8 ರಿಂದ ವಿಶೇಷ ಪೂಜೆ, ಅಲಂಕಾರ, ಪುಣ್ಯಾಹವಾಚನ, ಸಪ್ತಶತಿಪಾರಾಯಣ, ಸಾಮೂಹಿಕ ನವಗ್ರಹ ಹಾಗೂ ಧನ್ವಂತರಿ ಹೋಮಗಳು ಜರುಗಲಿವೆ.

ಸೆ. 24 ರಂದು ಬೆಳಗ್ಗೆ 8 ರಿಂದ ವಿಶೇಷ ಪೂಜೆ, ಅಲಂಕಾರ ಪುಣ್ಯಾಹವಾಚನ, ಸಪ್ತಶತಿಪಾರಾಯಣ ಸಪ್ತರಾತ್ರೋತ್ಸವ ಪ್ರಾರಂಭ ಸಾಮೂಹಿಕ ಪುರುಷ ಸೂಕ್ತ ಹಾಗೂ ಶ್ರೀಸೂಕ್ತ ಹೋಮ ಹಮ್ಮಿಕೊಳ್ಳಲಾಗಿದೆ. ಸೆ. 25 ರಂದು ಬೆಳಗ್ಗೆ ಸಾಮೂಹಿಕ ಗಣ ಹೋಮ, ಸೆ. 26 ರಂದು ಸಾಮೂಹಿಕ ಲಲಿತಾ ಸಹಸ್ರನಾಮ ಹೋಮ ನಡೆಯಲಿದೆ.

ಸೆ. 27 ರಂದು ಬೆಳಗ್ಗೆ ಲಕ್ಷ್ಮೀನಾರಯಣ ಹೃದಯ ಹೋಮ, ಸೆ. 28 ರಂದು ಬೆಳಗ್ಗೆ ಸಾಮೂಹಿಕ ನವಗ್ರಹ ಹೋಮ, ಸೆ. 29 ರಂದು ಸಂಜೆ 6ಕ್ಕೆ ಸರಸ್ವತಿ ಪೂಜೆ, ಸಾಮೂಹಿಕ ಸರಸ್ವತಿ ಹೋಮ, ಸೆ. 30 ರಂದು ಬೆಳಗ್ಗೆ ಸಾಮೂಹಿಕ ದುರ್ಗಾ ಹೋಮ, ಅ. 1 ರಂದು ಬೆಳಗ್ಗೆ ಸಾಮೂಹಿಕ ಚಂಡಿ ಹೋಮ ಜರುಗಲಿದೆ.

ಅ. 2 ರಂದು ವಿಜಯದಶಮಿ (ದಸರಾ) ದಿನ ಬೆಳಗ್ಗೆ 8 ರಿಂದ ವಿಶೇಷ ಪೂಜೆ, ಅಲಂಕಾರ, ಪುಣ್ಯಾಹವಾಚನ, ಸಪ್ತಶತಿಪಾರಾಯಣ, ರಥಾಂಗ ಹೋಮ ಹಾಗೂ ಶಾರದಾಂಬಾ ರಥೋತ್ಸವ ಜರುಗಲಿದೆ. ಅಲ್ಲದೆ, ಪ್ರತಿದಿನ ಸಂಜೆ 5.30 ರಿಂದ 6.30 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಮತ್ತು ಶಾರದಾಂಬೆಯ ರಥೋತ್ಸವ, ಮಂತ್ರಪುಷ್ಪ, ಅಷ್ಟಾವಧಾನ ಸೇವೆ ನಡೆಯಲಿವೆ ಎಂದು ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net