ಶರಣಸಂಗಮ ಸಮಾರಂಭ

Sharanasangama ceremony
ಗುಳೇದಗುಡ್ಡದ ಗುರುಸಿದ್ದೇಶ್ವರ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜು ಜವಳಿ ಮಾತನಾಡಿದರು. ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಗುರುಬಸವ ದೇವರು, ಚನ್ನಪ್ಪ ಚಿಂದಿ, ನಾಗೇಶಪ್ಪ ಪಾಗಿ, ಅಶೋಕ ಹೆಗಡೆ, ಶಿವಾನಂದ ಯಣ್ಣಿ ಇದ್ದರು.
Published on

ಗುಳೇದಗುಡ್ಡ: ಪಟ್ಟಣದ ಗುರುಸಿದ್ದೇಶ್ವರ ಮಠದಲ್ಲಿ ಜಗದ್ಗುರು ಶ್ರೀ ಗುರುಸಿದ್ದ ಪಟ್ಟದಾರ್ಯ ಮಹಾಸ್ವಾಮಿಗಳ 39ನೇ ವಾರ್ಷಿಕ ಪುಣ್ಯಾರಾಧನೆಯ ಶರಣಸಂಗಮ ಸಮಾರಂಭ 15ರಿಂದ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ರಾಜು ಜವಳಿ ತಿಳಿಸಿದರು.

ಶ್ರೀಮಠದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಸ್ತಾಪುರದ ಶಿವಲಿಂಗೇಶ್ವರಮಠದ ಡಾ. ಈಶ್ವರಾನಂದ ಸ್ವಾಮಿಗಳು ಉದ್ಘಾಟಿಸುವರು. ಕಣೇರಿ ಸಿದ್ಧಗಿರಿ ಸಂಸ್ಥಾನಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಭಾಲ್ಕಿ ಹಿರೇಮಠದ ನಾಡೋಜ ಡಾ. ಶ್ರೀ ಬಸವಲಿಂಗ ಪಟ್ಟದ್ಧೇವರು, ಚಿತ್ರದುರ್ಗದ ಮಾದರಚನ್ನಯ್ಯ ಗುರುಪೀಠದ ಶ್ರೀಮಾದರ ಚನ್ನಯ್ಯ ಸ್ವಾಮಿಗಳು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕ ಜಿ.ಟಿ. ಪಾಟೀಲ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಸಮಾರಂಭದಲ್ಲಿ ಪಾಲ್ಗೊಳ್ಳುವರು.ಪ್ರದೇಶ ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಶಂಕರ ಪೂಜಾರಿ, ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಉಪನ್ಯಾಸ ನೀಡುವರು ಎಂದು ಹೇಳಿದರು.

ಅಂದು ಬೆಳಗ್ಗೆ 4ಕ್ಕೆ ಸಾಮೂಹಿಕ ಲಿಂಗಪೂಜೆ, ಅಭಿಷೇಕ ನಡೆಯಲಿದೆ. 6ಕ್ಕೆ ಎಚ್.ಎಂ. ಮಾದರ ನೇತೃತ್ವದಲ್ಲಿ ಪ್ರಭಾತ ಯಾತ್ರೆ, ಭುಜಂಗರಾವ ದೇಸಾಯಿ ಅವರಿಂದ ಶರಣ ಧ್ವಜಾರೋಹಣ, 10.30ಕ್ಕೆ ರಕ್ತದಾನ ಶಿಬಿರ ನಡೆಯಲಿದೆ ಎಂದರು ಹೇಳಿದರು.

ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಗುರುಬಸವ ದೇವರು, ಚನ್ನಪ್ಪ ಚಿಂದಿ, ನಾಗೇಶಪ್ಪ ಪಾಗಿ, ಅಶೋಕ ಹೆಗಡೆ, ಶಿವಾನಂದ ಯಣ್ಣಿ, ಈರಣ್ಣ ಶೇಖಾ, ಸಂಗಪ್ಪ ಜವಳಿ, ರಂಗಪ್ಪ ಶೇಬಿನಕಟ್ಟಿ, ಭಾಗ್ಯಾ ಉದ್ನೂರ, ಗೌರಮ್ಮ ಕಲ್ಬುರ್ಗಿ, ಗಿರಿಜಾ ಕಲ್ಯಾಣಿ, ಸೋಮಶೇಖರ ಕಲ್ಬುರ್ಗಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net