ಶರಣರ ವಚನ ಸಾಹಿತ್ಯ ವಿಶ್ವಕ್ಕೆ ಮಾದರಿ

15 DVD 04
ದೇವದುರ್ಗದ ಮುಕ್ತಾಯಕ್ಕ ಕಾಲೇಜಿನಲ್ಲಿ ಕಸಾಪದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ಚನ್ನಪ್ಪ ಪವರ್, ಶ್ರೀಗುರುವಾಣಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷೆ ರೇಖಾರಾಣಿ ಪಾಟೀಲ್, ರೇಣುಕಾ ಪಾಟೀಲ್, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಉಪನ್ಯಾಸಕರಾದ ವಿನೋದ ನಾಯಕ, ತಿಮ್ಮಣ್ಣ ನಾಯಕ, ಚಿದಾನಂದಪ್ಪ, ಸಿದ್ದಪ್ಪ ಇದ್ದರು.
Published on

ದೇವದುರ್ಗ: ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು, ಬದುಕಿನ ಚಿಂತನೆಗಳು ಹಾಗೂ ಕಾಯಕ, ದಾಸೋಹ ಮೌಲ್ಯ ಅಡಕವಾಗಿವೆ. ವಚನ ಸಾಹಿತ್ಯ ವಿಶ್ವಕ್ಕೆ ಮಾದರಿಯಾಗಿದೆ ಎಂದು ಉಪನ್ಯಾಸಕ ಮರಿಯಪ್ಪ ಕೋರಿ ಹೇಳಿದರು.

ಪಟ್ಟಣದ ಮುಕ್ತಾಯಕ್ಕ ಮಹಿಳಾ ಪದವಿ ಕಾಲೇಜಿನಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದರು.

ಬಸವ ಪರಂಪರೆ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದಿದೆ. ಅಸಮಾನತೆ, ಜಾತಿ ಪದ್ಧತಿ ನಿರ್ಮೂಲನೆ ಹಾಗೂ ಸೌಹಾರ್ದತೆ ಮನೋಭಾವನೆ ಬಿತ್ತಿದೆ. 12ನೇ ಶತಮಾನದ ವಚನಕಾರರಲ್ಲಿ ಮಡಿವಾಳ ಮಾಚಿದೇವರು, ಹಡಪದ ಅಪ್ಪಣ್ಣ ಅವರ ವಚನಗಳು ಇಂದಿಗೂ ಪ್ರಸ್ತುತ ಸಮಾಜಕ್ಕೆ ಬೆಳಕು ನೀಡುತ್ತಿವೆ. ಮಡಿವಾಳ ಮಾಚಿದೇವರು ಕಾಯಕದ ಮಹತ್ವವನ್ನು ವಚನ ಪರಂಪರೆಯಲ್ಲಿ ಸಾರಿದ್ದಾರೆ ಎಂದರು.

ಕಸಾಪ ಮಾಜಿ ಕಾರ್ಯದರ್ಶಿ ಪ್ರಕಾಶ ಪಾಟೀಲ್ ಅಮರಾಪುರ ಮಾತನಾಡಿ, ಪುರಾಣ ಮತ್ತು ವೀರಶೈವ ಸಾಹಿತ್ಯ ಸಮಾಜದಲ್ಲಿ ಶಾಂತಿ ಸಮಾನತೆ ಸೌಹಾರ್ದತೆ ಹುಟ್ಟುಹಾಕಿದೆ. ಧಾರ್ಮಿಕ ಆಚರಣೆಗಳು ಭಕ್ತಿ ಭಾವ ಆಲೋಕಿಕ ಶಕ್ತಿ ಸಾಹಿತ್ಯದಲ್ಲಿ ಅಡಗಿದ್ದು ಇದರ ಜತೆಗೆ ಇಂದಿನ ಸಮಾಜದಲ್ಲಿ ಶೈಕ್ಷಣಿಕ ಬೆಳವಣಿಗೆಗೆ ವೀರಶೈವ ಸಮಾಜದ ಮಠಗಳು ಜಾತಿಭೇದ, ಧರ್ಮಭೇದ ಇಲ್ಲದೆ ಶೈಕ್ಷಣಿಕ ಬೆಳವಣಿಗೆಗೆ ಎಲ್ಲ ಸಮುದಾಯಗಳಿಗೆ ಆಶ್ರಯ ತಾಣಗಳಾಗಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net