ಶರಣರ ವಚನಗಳು ಸಾರ್ವತ್ರಿಕ ಸತ್ಯ

22Jaggu2
ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಂಜನಾ ಅಗಸಿಮನಿ, ಲಕ್ಷ್ಮೀ ಬಹದ್ದೂರಿ, ಭೀಮಾಶಂಕರ ಕುಂಬಾರ, ಲಲಿತಾ ಮಹಾಜನಶೆಟ್ಟಿ, ಶ್ರೀದೇವಿ ನರಗುಂದ, ಶೋಭಾ ಪಾಶ್ಚಾಪುರ ಇತರರಿದ್ದರು.
Published on

ಬೆಳಗಾವಿ: ಶರಣರ ವಚನಗಳು ಜೀವನದ ಸಾರ್ವತ್ರಿಕ ಸತ್ಯದ ಎಲ್ಲ ಆಯಾಮಗಳನ್ನು ಒಳಗೊಂಡಿವೆ. ಮಕ್ಕಳಿಗೆ ವಚನ ಪಾಠ ಮಾಡಿಸುವುದರಿಂದ ಅವರ ಆಚಾರ-ವಿಚಾರಗಳಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಶಿಕ್ಷಕಿ ಲಲಿತಾ ಮಹಾಜನಶೆಟ್ಟಿ ಹೇಳಿದರು.

ಲಿಂಗಾಯತ ಸಂಘಟನೆಯಿಂದ ನಗರದ ಹಳಕಟ್ಟಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಶಿಕ್ಷಕರ ಗೌರವ ಸನ್ಮಾನ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಶರಣರ ವಚನಗಳನ್ನು ಮನನ ಮಾಡಿಸುವುದರ ಜತೆಗೆ ಆಚರಣೆಯಲ್ಲೂ ತರುವ ಪ್ರಯತ್ನ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಸಂಸ್ಕಾರ ಕಳೆದುಕೊಳ್ಳುತ್ತಿರುವ ಪ್ರಸ್ತುತ ಸಮಾಜದಲ್ಲಿ ವಚನ ಸಾಹಿತ್ಯ ಅನುಕರಿಸಿದರೆ ಸನ್ಮಾರ್ಗ ಲಭಿಸುತ್ತದೆ. ಸಮಾಜದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದರು. ಸೇವಾ ನಿವೃತ್ತರಾದ ಶ್ರೀದೇವಿ ನರಗುಂದ, ಶೋಭಾ ಪಾಶ್ಚಾಪುರ, ಸಿ.ಟಿ. ತುಬಾಕಿ, ಎ.ಬಿ. ಮಡಿವಾಳರ, ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಅಂಜನಾ ಅಗಸಿಮನಿ, ಲಕ್ಷ್ಮೀ ಬಹದ್ದೂರಿ, ಭೀಮಾಶಂಕರ ಕುಂಬಾರ ಅವರನ್ನು ಸನ್ಮಾನಿಸಲಾಯಿತು. ಹೂಗಾರ ಮಾದಯ್ಯನವರ ಜಯಂತಿ ನಿಮಿತ್ತ ಶಿಕ್ಷಕಿ ಸುಶೀಲಾ ಗುರವ ವಿಶೇಷ ಉಪನ್ಯಾಸ ನೀಡಿದರು.

ಸಂಘಟನೆ ಸದಸ್ಯರಾದ ಸದಾಶಿವ ದೇವರಮನಿ, ವಿ.ಕೆ. ಪಾಟೀಲ, ಶಶಿಭೂಷಣ ಪಾಟೀಲ, ಆನಂದ ಕರ್ಕಿ, ಅಶೋಕ ಖೋತ, ಮಹೇಶ ಅಕ್ಕಿ, ಸುನೀಲ ಸಾಣಿಕೊಪ್ಪ, ವಿರೂಪಾಕ್ಷ ದೊಡ್ಡಮನಿ, ವಿಜಯ ಕಿಳ್ಳಿಕೇತರ ಇತರರಿದ್ದರು. ಮಹಾದೇವಿ ಅರಳಿ ಪ್ರಾರ್ಥಿಸಿದರು. ಸಂಗಮೇಶ ಅರಳಿ ಸ್ವಾಗತಿಸಿದರು. ಎಂ.ವೈ. ಮೆಣಸಿನಕಾಯಿ ಪರಿಚಯಿಸಿದರು. ಶಿವಾನಂದ ತಲ್ಲೂರ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net