

ಹಾವೇರಿ: ಮನುಷ್ಯನ ಪರಿಪೂರ್ಣ ಬದುಕಿಗೆ ಪದವಿ, ಪಾವಿರ್ತ್ಯತೆ ಜೊತೆಗೆ ಹೃದಯ ವೈಶಾಲ್ಯತೆ ಸೃಷ್ಟಿಗೆ ಶರಣರ ವಚನಗಳು ಮಾರ್ಗಸೂಚಿ ಆಗಬಲ್ಲವು ಎಂದು ಹೊಸಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಹೊಸಮಠದ ಬಸವಕೇಂದ್ರ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಶರಣ ಸಂಗಮ ಹಾಗೂ ಮಠದಂಗಳದಲ್ಲಿ ಮಹಾಮನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯನ ಸಂತೃಪ್ತ ಬದುಕಿಗೆ ಮೌಲ್ಯಗಳು ಅತಿ ಮುಖ್ಯ. ಅದೇ ಕಾರಣಕ್ಕೆ ಕವಿಗಳು, ಸಂತರು, ಮಹಾಂತರು, ವಿಜ್ಞಾನಿಗಳು ಮೌಲ್ಯಯುತ ಸಂದೇಶ ನೀಡಿರುವರು. ಬಸವಾದಿ ಶರಣರೂ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಅದ್ಭುತ ಸಂದೇಶ ನೀಡಿರುವರು. ಅವುಗಳ ಅನುಕರಣೆ ಇಂದಿನ ದಿನದಲ್ಲಿ ಅಗತ್ಯ. ನಮ್ಮ ಬದುಕು ಭರವಸೆಗಳನ್ನು ಬೆನ್ನೆತ್ತಬೇಕು ಹೊರತು ದುರಾಸೆಗಳನ್ನಲ್ಲ. ಸುಂದರ ಬದುಕು ನಮ್ಮದಾಗಿಸಲು ವಚನಗಳು ದಾರಿದೀಪಗಳಾಗಿವೆ ಎಂದರು.
ಶಿಕ್ಷಕ ಮಾಲತೇಶ ನಾಯ್ಕೋಡ ಉಪನ್ಯಾಸ ನೀಡಿದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀನಿವಾಸ ಟಿ., ಜಯಶ್ರೀ ಕೊರಗರ, ಶಾಂತಾ ಭಜಂತ್ರಿ, ಸರೋಜಾ ಅಗಡಿ, ರಾಜೇಶ್ವರಿ ಬಿಷ್ಟನಗೌಡ್ರ, ಜಯಮ್ಮ ಅಗಡಿ ಅವರನ್ನು ಮಠದಿಂದ ಸನ್ಮಾನಿಸಲಾಯಿತು.
ವಚನ ಗೋಷ್ಠಿಯಲ್ಲಿ ಬಸವರಾಜ ಸಣ್ಣಂಗಿ, ರಂಜನಾ ಭಟ್, ರೇಣುಕಾ ಗುಡಿಮನಿ, ಜುಬೇದಾ ನಾಯ್ಕ್, ಅಂಬಿಕಾ ಹಂಚಾಟೆ, ಚಂಪಾ ಹುಣಸಿಕಟ್ಟಿ, ಜ್ಯೋತಿ ಬಶೆಟ್ಟಿ, ಅಪ್ಸರಾ ತುಮ್ಮಿನಕಟ್ಟಿ, ಮಲ್ಲೇಶ ದಂಡಿನ, ಭೂಮಿಕಾ ರಜಪೂತ, ವಿನೂತಾ ಅಂಗಡಿ, ಮೇನಾ ಟಿ.ಎಸ್. ಮತ್ತು ಲಿಪಿಕಾ ಟಿ.ಎಸ್. ಪಾಲ್ಗೊಂಡಿದ್ದರು.
ಜಿ.ಎಂ. ಓಂಕಾರಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಹಿತಿ ಸತೀಶ ಕುಲಕಣಿರ್, ಗೂಳಪ್ಪ ಅರಳಿಕಟ್ಟಿ, ಅನಿತಾ ಉಪಲಿ, ಸತೀಶ ಎಂ.ಬಿ., ಚಂದ್ರು ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.