ಶರಣರ ವಚನ ಸಮಾಜಕ್ಕೆ ಮಾದರಿ

0101
Published on

ಬೈಲಹೊಂಗಲ: ಶರವಣರ ವಚನಗಳು ಸಮಾಜಕ್ಕೆ ಮಾದರಿಯಾಗಿವೆ. ಹಾಗಾಗಿ ಶಿವದಾಸಿಮಯ್ಯ ಅವರ ವಚನಗಳನ್ನು ಸರ್ಕಾರ ಹೊರತಬೇಕು ಎಂದು ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.

ಪಟ್ಟಣದ ರುದ್ರಾಕ್ಷಿ ಮಠದಲ್ಲಿ ಲಿಂಗಾಯತ ಶಿವಶಿಂಪಿ ಸಮುದಾಯದ ಆಶ್ರಯದಲ್ಲಿ ಜರುಗಿದ ಶಿವಶರಣ ಶಿವದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದ ಉದ್ಧಾರಕ್ಕೆ ಶಿವಶರಣರು ನೀಡಿದ ಕೊಡುಗೆ ಅಪಾರವಾಗಿದೆ. ಅದರಲ್ಲೂ ಶಿವಶಿಂಪಿ ಸಮಾಜಕ್ಕೆ ಶಿವದಾಸಿಮಯ್ಯ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.

ಸಮುದಾಯದ ಮುಖಂಡ ಪರಂಜ್ಯೋತಿ ಉಮರಾಣಿ ಮಾತನಾಡಿ, ಸಮಾಜಕ್ಕೆ ಶಿವದಾಸಿಯ್ಯ ಅವರು ದೊಡ್ಡ ಕಾಣಿಕೆ ನೀಡಿದ್ದಾರೆ. ಅವರ ತತ್ತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಇದಕ್ಕೂ ಮುನ್ನ ಸಾಮೂಹಿಕ ಲಿಂಗಪೂಜೆ, ಉಡಿ ತುಂಬುವ ಕಾರ್ಯಕ್ರಮ, ಪೂರ್ಣಕುಂಭ ಆರತಿಯೊಂದಿಗೆ ಶಿವದಾಸಿಮಯ್ಯ ಭಾವಚತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈರಪ್ಪ ಕಾದ್ರೊಳ್ಳಿ ಮಾತನಾಡಿದರು. ರುದ್ರಪ್ಪ ಕಾದ್ರೊಳ್ಳಿ, ಶಿವಶಿಂಪಿ ಸಮುದಾಯದ ಉಪಾಧ್ಯಕ್ಷ ಗಿರಿಮಲ್ಲಪ್ಪ ಆಸಂಗಿ, ಅಣ್ಣಪ್ಪ ರೇಶ್ಮಿ, ರಮೇಶ ನಿಟ್ಟೂರ, ದೊಡ್ಡವೀರಪ್ಪ ಕಾದ್ರೊಳ್ಳಿ, ಶಿವಾನಂದ ಪಾವಟೆ, ಕುಮಾರ ರೇಶ್ಮಿ, ಸಂಗಪ್ಪ ಕಾದ್ರೊಳ್ಳಿ, ಜಗದೀಶ ಲೋಕಾಪುರ ಇತರರು ಇದ್ದರು.

ಡಾ.ಮಹಾಂತೇಶ ರಾಮಣ್ಣವರ ಸ್ವಾಗತಿಸಿದರು. ಮಹಾಂತೇಶ ರೇಶ್ಮಿ ಮತ್ತು ವಿರೂಪಾಕ್ಷ ಕಾದ್ರೊಳ್ಳಿ ನಿರೂಪಿಸಿದರು. ಬಾಲಚಂದ್ರ ರೇಶ್ಮಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net