ಶರಣರ ಸಂದೇಶ ಅರಿಯಲಿ

6MDLG1
Published on

ಮೂಡಲಗಿ: ಅಂತರಂಗದ ಶ್ರೀಮಂತಿಕೆ ವೃದ್ಧಿಸಿಕೊಳ್ಳುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಪಡೆಯಬೇಕು ಎಂದು ಅರಬಾವಿ ಜಗದ್ಗುರು ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಅರಬಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಸಿದ್ಧಸಂಸ್ಥಾನ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಸಿಕ ಶಿವಾನುಭವಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಶರಣರ ಕಾಯಕ ಮತ್ತು ದಾಸೋಹವು ಸಮಾಜಕ್ಕೆ ನೀಡಿರುವ ಬಹುದೊಡ್ಡ ಆದರ್ಶಗಳಾಗಿವೆ. ಶರಣರ ಸಂದೇಶ ಅರಿತು ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು. ಶಿಕ ರಮೇಶ ಮಿರ್ಜಿ ಮಾತನಾಡಿ, ಅಂತರಾಳದ ಶ್ರೀಮಂತಿಕೆ ಬಳಸಿದಂತೆ ಬೆಳೆಯುತ್ತದೆ. ಆರ್ಥಿಕ ಶ್ರೀಮಂತಿಕೆ ಬಳಸಿದಂತೆ ಕರಗುತ್ತದೆ. ಶರಣರಂತೆ ಬದುಕುವುದನ್ನು ಕಲಿಯಬೇಕಾಗಿದೆ ಎಂದರು.

ಮೂಡಲಗಿ ತಹಸೀಲ್ದಾರ್​ ಶಿವಾನಂದ ಬಬಲಿ, ಲಕ್ಷಿ$್ಮ ಪೂಜಾರಿ, ಬಾಬುರಾವ ಬೆಳವಿ ಅವರನ್ನು ಸನ್ಮಾನಿಸಲಾಯಿತು. ಗಣೇಶವಾಡಿ, ಹೊಸೂರ ಗ್ರಾಮದ ಭಕ್ತರಿಂದ ದಾಸೋಹ ಸೇವೆ ಜರುಗಿತು. ಅಪ್ಪಾಸಾಹೇಬ ಕುರುಬರ ಬಳಗದಿಂದ ಸಂಗೀತ ಸೇವೆ ಜರುಗಿತು. ಪ್ರೊ.ವಿ.ಕೆ. ನಾಯಿಕ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net