ಶರಣರ ಸಾಹಿತ್ಯ ಅತ್ಯಂತ ಶ್ರೀಮಂತ

26manju2
ಬೆಳಗಾವಿ ನಗರದ ಮಹಾಂತ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಸಿದ್ದು ಯಾಪಲಪರ್ವಿ ಧ್ವಜಾರೋಹಣ ನೆರವೇರಿಸಿದರು. ಬಸವರಾಜ ರೊಟ್ಟಿ, ಅಶೋಕ ಮಳಗಲಿ, ನೇತ್ರವಾತಿ ರಾಮಾಪೂರಿ ಇತರರಿದ್ದರು.
Published on

ಬೆಳಗಾವಿ: ಅಕ್ಕಮಹಾದೇವಿ, ಅಲ್ಲಮಪ್ರಭು, ಚನ್ನ ಬಸವಣ್ಣ, ಬಸವಣ್ಣನವರ ವಚನಗಳು ಸಾರ್ವಕಾಲಿಕ. ಹೀಗಾಗಿ ಒಬ್ಬೊಬ್ಬ ಶರಣರಿಗೂ ಒಂದೊಂದು ನೊಬೆಲ್ ಪ್ರಶಸ್ತಿ ಬರಬೇಕು ಎಂದು ಸಾಹಿತಿ ಪ್ರೊ.ಸಿದ್ದು ಯಾಪಲಪರ್ವಿ ಹೇಳಿದರು.

ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 20ನೇ ಶತಮಾನದಲ್ಲಿ ಮನಸ್ಸಿನ ಕುರಿತು ಸಂಶೋಧನೆ ಮಾಡಿ ನೊಬೆಲ್ ಪ್ರಶಸ್ತಿ ಪಡೆದ ವಿದ್ವಾಂಸರು ಹೇಳಿದ ವಿಷಯಗಳನ್ನು 12ನೇ ಶತಮಾನದ ಬಸವಣ್ಣ, ಚನ್ನ ಬಸವಣ್ಣ ಅಲ್ಲಮ, ಅಕ್ಕಮಹಾದೇವಿ ವಚನಗಳ ಮೂಲಕ ಹೇಳಿದ್ದಾರೆ. ಹೀಗಾಗಿ ವಚನ ಸಾಹಿತ್ಯ ಎಷ್ಟೊಂದು ಶ್ರೀಮಂತ ಸಾಹಿತ್ಯ ಅನ್ನುವುದು ನಮಗೆ ತಿಳಿಯುತ್ತದೆ ಎಂದರು.

ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಚಂದ್ರಪ್ಪ ಬೂದಿಹಾಳ, ನೇತ್ರಾವತಿ ಕೆಂಪಣ್ಣ ರಾಮಾಪೂರಿ, ಅರವಿಂದ ಪರುಶೆಟ್ಟಿ, ಶಂಕರ ಶೆಟ್ಟಿ, ರುದ್ರಗೌಡರ, ಶಿವಾನಂದ ನಾಯಕ, ಪ್ರವೀಣ ಚಿಕಲಿ, ಮೋಹನ ಗುಂಡ್ಲೂರ, ಬಸವರಾಜ ಮಿಂಡೊಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net