ಶರಣರ ಜೀವನಾದರ್ಶ ಮೈಗೂಡಿಸಿಕೊಳ್ಳಿ

Sirguppa Swamy
ಹೆರಕಲ್ಲು ಗ್ರಾಮದ ಮರಿಶಿವಯೋಗಿಗಳ ಮಠದಲ್ಲಿ ಸಜ್ಜಲಗುಡ್ಡದ ಶರಣಮ್ಮ ತಾಯಿ ಪುರಾಣ ಪ್ರವಚನಕ್ಕೆ ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ ಚಾಲನೆ ನೀಡಿದರು. ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯರು, ಗುರು ನೀಲಕಂಠಾರ್ಯ ಸ್ವಾಮೀಜಿ ಇದ್ದರು.
Published on

ಸಿರಗುಪ್ಪ: ಸಜ್ಜಲಗುಡ್ಡದ ಶರಣಮ್ಮ ತಾಯಿ ಅನೇಕ ಪವಾಡಗಳ ಮೂಲಕ ಭಕ್ತರ ಇಷ್ಟಾರ್ಥ ಈಡೇರಿಸಿದರು ಎಂದು ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಹೆರಕಲ್ಲು ಗ್ರಾಮದ ಶ್ರೀ ಮರಿ ಶಿವಯೋಗಿಗಳ ಮಠದಲ್ಲಿ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿ ಪುರಾಣ ಪ್ರವಚನಕ್ಕೆ ಶನಿವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಲಿಂ.ಚಿದಾನಂದಯ್ಯ ತಾತನ ಸಂಕಲ್ಪದಂತೆ ಅವರ ಅನುಪಸ್ಥಿತಿಯಲ್ಲಿ ಈ ಪುರಾಣ ಪ್ರವಚನ ಕಾರ್ಯಕ್ರಮವನ್ನು ಶ್ರೀ ಭುವನೇಶ್ವರಿ ಅಮ್ಮನವರ ನೇತೃತ್ವದಲ್ಲಿ ನೆರವೇರುತ್ತಿದೆ. ಸಮಾಜದಲ್ಲಿ ಸಜ್ಜಲಗುಡ್ಡದ ಶರಣಮ್ಮನಂತೆ ಅನೇಕ ಮಹಿಳೆಯರು ಸಾಧನೆಗೈದು ಮಹಾತ್ಮರಾಗಿದ್ದಾರೆ. ಸಜ್ಜಲಗುಡ್ಡದ ಶರಣಮ್ಮ, ಆದೋನಿ ಲಕ್ಷ್ಮಮ್ಮ, ರಾಯಚೂರು ಹನುಮಂತವ್ವ ಸೇರಿ ಅನೇಕ ಶರಣರು ಅಧ್ಯಾತ್ಮದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಬೆಳಕು ನೀಡಿದವರಾಗಿದ್ದಾರೆ. ಶರಣರ ಬದುಕು ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.

ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯರು, ಗುರು ನೀಲಕಂಠಾರ್ಯ ಸ್ವಾಮೀಜಿ, ಪುರಾಣ ಪ್ರವಚನಕಾರ ಪ್ರಭಯ್ಯ ಶಾಸ್ತ್ರಿ, ಸಂಗೀತಗಾರ ಜಗನ್ನಾಥ್ ಗವಾಯಿ, ತಬಲಾವಾದಕ ಮೌನೇಶ ಆಚಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net