

ಉಗರಗೋಳ: ಶರಣರ ತತ್ತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವೈ.ವೈ. ಕಾಳಪ್ಪನವರ ಹೇಳಿದರು.
ಇಲ್ಲಿನ ಡಾ. ಅಂಬೇಡ್ಕರ್ ನಗರದಲ್ಲಿರುವ ಹೂಲಿ ಅಜ್ಜನವರ ಮಠದಲ್ಲಿ ಗುರುವಾರ ಶಿವಶರಣ ಮಾದರ ಚನ್ನಯ್ಯ ಅವರ 974ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕಿನಲ್ಲಿ ಆತ್ಮವಿಶ್ವಾಸವಿರಬೇಕು.
ಮಹಾತ್ಮರ, ಸಂತರ, ದಾರ್ಶನಿಕರ ಆದರ್ಶಗಳನ್ನು ಪಾಲಿಸದರೆ ಬಾಳಿನ ಬಂಡಿ ಸುಗಮವಾಗಿ ಸಾಗುತ್ತದೆ ಎಂದರು. ಹನಮಂತಪ್ಪ ಮ್ಯಾಗೇರಿ, ಪ್ರಕಾಶ ಮ್ಯಾಗೇರಿ, ಯಲ್ಲಪ್ಪ ಮಿಯಪ್ಪನವರ, ರಾಮು ಕಾಳಪ್ಪನವರ, ಪರಸಪ್ಪ ಬಸಲಿಂಗನವರ, ಸಿದ್ದಪ್ಪ ಮ್ಯಾಗೇರಿ, ಮಂಜುನಾಥ ಕೊಟೂರ, ವಿರೂಪಾಕ್ಷ ಬೇವಿನಗಿಡದ, ಮುಡ್ಡಪ್ಪ ಮ್ಯಾಗೇರಿ ಇತರರು ಇದ್ದರು.