ಶರಣರ ದರ್ಶನ ಪುಸ್ತಕ ಬಿಡುಗಡೆ

New Agasimani new
Published on

ಹುಬ್ಬಳ್ಳಿ : ಹಾಸ್ಯ ಕವಿ ವಸಂತ ಅಗಸಿಮನಿ ಅವರು ತಮ್ಮ 50ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಸಂಪಾದಿಸಿದ ‘ಶರಣರ ದರ್ಶನ ಪುಸ್ತಕ’ದ ಬಿಡುಗಡೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ನಗರದಲ್ಲಿ ಭಾನುವಾರ ನಡೆಯಿತು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ, ಹಾಸ್ಯ ವಿಡಂಬನೆ, ಚುಟುಕು, ಕವನ, ಹನಿಗವನಗಳ ಮೂಲಕ ಹುಬ್ಬಳ್ಳಿ ಸಾಹಿತ್ಯ ವಲಯದಲ್ಲಿ ವಸಂತ ಅಗಸಿಮನಿ ಗುರುತಿಸಿಕೊಂಡಿದ್ದಾರೆ ಎಂದರು.

ಸತಿಯೇ ಸೌಭಾಗ್ಯ, ದೀಪಾವಳಿ, ಆದರ್ಶ ಪ್ರೇಮ, ರತ್ನ ಮಾಂಗಲ್ಯ, ಗಂಡನ ಆಜ್ಞೆ ಇನ್ನಿತರ 50 ಕ್ಕೂ ಹೆಚ್ಚು ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ವಿಶೇಷವಾಗಿ ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ನಟರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಪತ್ರಕರ್ತ ವೀರೇಶ ಹಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯನಗರ ಶಿವಗಿರಿಕಾಲನಿಯ ಸೋಮನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಾನಂದಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಹುಬ್ಬಳ್ಳಿ ಶಹರ ಘಟಕದ ಪದಾಧಿಕಾರಿಗಳಾದ ಎಸ್.ವಿ. ಬಿದರಳ್ಳಿ, ಎಂ.ಸಿ. ಕಮ್ಮಾರ, ಪ್ರಸಾದ ಅಗಸಿಮನಿ, ಹನುಮಂತ ಹಿರೇಮನಿ, ನಾಗನಾಥ ಬೆಲ್ಲಾಳೆ, ಪ್ರದೀಪ ಅಗಸಿಮನಿ, ಮಾರುತಿ ಭೋವಿ, ಶಿವನಗೌಡ ಪಾಟೀಲ, ಪ್ರವೀಣ ಅಗಸಿಮನಿ ಹಾಗೂ ಇತರರು ಇದ್ದರು.

ಮಲ್ಲಿಕಾರ್ಜುನ ಕಮ್ಮಾರ ನಿರೂಪಿಸಿದರು. ಪ್ರಮೋದ ಅಗಸಿಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net