

ಕಲಬುರಗಿ: ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಾ.೧೮, ೧೯ರಂದು ಎರಡು ದಿನ ನಗರದ ದೇವಸ್ಥಾನ ಸಂಪರ್ಕಿಸುವ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್‌ಗೆ ಸ್ಥಳ ನಿಗದಿಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದ್ದಾರೆ. ಎರಡು ದಿನ ಲಾಲ್‌ಗೇರಿ ಕ್ರಾಸ್‌ನಿಂದ ಗೋವಾ ಹೊಟೇಲ್‌ವರೆಗೆ ಸಂಚಾರ ಸಂಪೂರ್ಣ ಬಂದ್ ಇರಲಿದೆ. ಶಹಾಬಜಾರ್ ಕ್ರಾಸ್‌ನಿಂದ ದೇವಸ್ಥಾನ, ಎನ್.ವಿ.ಕಾಲೇಜ್ ಮುಖ್ಯ ಗೇಟ್‌ನಿಂದ, ಪಬ್ಲಿಕ್ ಗಾರ್ಡ್ನ ಡೈನೋಸಾರ್ ಕ್ರಾಸ್, ದಾವಣಗೆರೆ ಬೆಣ್ಣೆದೋಸಾ ಹೊಟೇಲ್‌ದಿಂದ ಮೀನು ಮಾರ್ಕೆಟ್ ರಸ್ತೆ ಸೇರಿ ದೇವಸ್ಥಾನಕ್ಕೆ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಮಧ್ಯಾಹ್ನ ೨ಗಂಟೆಯಿAದ ರಾತ್ರಿ ೮ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಪಾರ್ಕಿಂಗ್‌ಗೆ ಸ್ಥಳ: ಅಪ್ಪ ಪಬ್ಲಿಕ್ ಶಾಲೆ ಆವರಣ, ಎನ್.ವಿ.ಮೈದಾನದಲ್ಲಿ ದ್ವಿಚಕ್ರವಾಹನ ನಿಲುಗಡೆ. ಗದಲೇಗಾಂವ ಕಲ್ಯಾಣ ಮಂಟಪ, ವೀರಶೈವ ಕಲ್ಯಾಣ ಮಂಟಪ ಎದುರು, ರೋಟರಿ ಕ್ಲಬ್ ಶಾಲಾ ಆವರಣ, ಎನ್.ವಿ.ಮೈದಾನದಲ್ಲಿ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬೇಕು.
| ಡಾ.ಶರಣಪ್ಪ ಎಸ್.ಡಿ.
ನಗರ ಪೊಲೀಸ್ ಆಯುಕ್ತ