

ಚಿತ್ರದುರ್ಗ: ಶರಣಸಂಸ್ಕೃತಿ ಉತ್ಸವ-2022ರ ಅಂಗವಾಗಿ ಮಂಗಳವಾರ ಶ್ರೀ ಮರುಘಾಮಠದ ಅನುಭವ ಮಂಟಪದ ಆವರಣದಲ್ಲಿ ಬಸವತತ್ತ್ವ ಧ್ವಜಾ ರೋಹಣ ನೆರವೇರಿತು.
ಹೆಬ್ಬಾಳು ಶ್ರೀ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಕತೃಗದ್ದುಗೆಗೆ ವಚನಾಭಿಷೇಕ ನಂತರ ಧ್ವಜಾರೋಹಣ ನೆರವೇರಿಸಿದ ಕನಕಪುರ ಶ್ರೀ ಮರಳೆ ಗವಿಮಠದ ಶ್ರೀಮುಮ್ಮಡಿ ಶಿವರುದ್ರ ಸ್ವಾಮೀಜಿ, ಮಾತನಾಡಿ,ಶೂನ್ಯಪೀಠದ ಪರಂಪರೆಯಲ್ಲಿ ಯಾ ವು ದೂ ನಿಲ್ಲುವುದಿಲ್ಲ,ನಿರಂತರ ನಡೆಯುತ್ತಿರುತ್ತದೆ.
ಇದು ಮುರುಗಿ ಶಾಂತವೀರರ ಶಕ್ತಿ. ಸೂರ್ಯನ ಮುಂದೆ ಮೋಡಗಳು ಬರುತ್ತವೆ. ಮೋಡ ಕರಗಿ ಸೂರ್ಯ ಉಳಿದುಕೊಳ್ಳುತ್ತಾನೆ. ನಡೆ ಮ ತ್ತು ನುಡಿ ಇಲ್ಲಿ ಮುಖ್ಯ. ವಿಶಿಷ್ಟ ಪರಂಪರೆಯ ನೇರ ನುಡಿಯ ದಿಟ್ಟಮಠ ಶ್ರೀ ಮುರುಘಾಮಠ. ಶ್ರೀ ಮಠ ನಮ್ಮಂತಹ ಅನೇಕ ಶಾಖಾ ಮ ಠಗಳು ಮುನ್ನೆಡೆಸುತ್ತಿದೆ. ಈ ಬಾರಿಯ ಶರಣಸಂಸ್ಕೃತಿ ಉತ್ಸವ ಸರಳವು ಅಲ್ಲ,ವೈಭವವೂ ಅಲ್ಲ. ಇದು ಪರಂಪರೆ. 3 ದಿನಗಳ ಈ ಕಾರ‌್ಯಕ್ರಮ ಯಶಸ್ವಿಯಾಗಲಿ ಎಂದರು.
ಶರಣಸಂಸ್ಕೃತಿ ಉತ್ಸವ ಸಮಿತಿ ಗೌರವಾಧ್ಯಕ್ಷ ವಿಜಯಪುರ ಶ್ರೀ ಗಾಣಿಗ ಗುರುಪೀಠದ ಡಾ.ಬಸವಕುಮಾರಸ್ವಾಮೀಜಿ, ಕಾರ್ಯಾಧ್ಯಕ್ಷ ಎಸ್. ಲಿಂಗಮೂರ್ತಿ ಮಾತನಾಡಿದರು. ಮಹಾಂತ ರುದ್ರೇಶ್ವರ ಸ್ವಾಮೀಜಿ,ಶ್ರೀ ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀ ಭೋವಿ ಗುರುಪೀಠದ ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ,ವಿವಿಧ
ಶಾಖಾಮಠಾಧೀಶರು,ಹರಗುರುಚರಮೂರ್ತಿಗಳು, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಬಿ.ವಸ್ತ್ರಮಠದ್,ಆಡಳಿತ ಮಂಡಳಿ ನಿರ್ದೇಶಕರು,ಸದಸ್ಯರು ಹಾಗೂ ವಿವಿಧ ಶಾಲಾ,ಕಾಲೇ ಜುಗಳ ಮುಖ್ಯಸ್ಥರು ಇದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥಿಸಿದರು. ಶ್ರೀ ಬಸವಪ್ರಭು ಸ್ವಾಮೀಜಿ ಕಾರ‌್ಯಕ್ರಮ ನಿರೂಪಿಸಿದರು.
----