

ರಟ್ಟಿಹಳ್ಳಿ: ವೃತ್ತಿಯಲ್ಲಿ ಅಂಬಿಗನಾದರೂ ಪ್ರವೃತ್ತಿಯಲ್ಲಿ ಚೌಡಯ್ಯನವರು ಅನುಭಾವಿ ವಚನಕಾರರಾಗಿದ್ದರು. ಸಮಾಜದಲ್ಲಿನ ಅಸಮಾನತೆ, ಮೌಢ್ಯ, ಜಾತಿಯ ಶೋಷಣೆಗಳು ಹೀಗೆ ಅನೇಕ ವಿಚಾರಗಳ ಕುರಿತು ವಚನಗಳಲ್ಲಿ ವಿಡಂಬನೆಯ ಮೂಲಕ ಸಂದೇಶಗಳನ್ನು ಸಾರಿರುವ ನೇರ ನಿಷ್ಠುರ ವಚನಕಾರರಾಗಿದ್ದಾರೆ ಎಂದು ನಿಜಶರಣದ ಅಂಬಿಗರ ಚೌಡಯ್ಯನವರ ಸಂಘದ ಅಧ್ಯಕ್ಷ ಮಾರುತಿ ಸುಣಗಾರ ಹೇಳಿದರು.
ಸ್ಥಳೀಯ ತುಳಜಾ ಭವಾನಿ ದೇವಸ್ಥಾನದ ಬಳಿ ಪಟ್ಟಣದ ಗಂಗಾಮತ ಸಮಾಜದ ವತಿಯಿಂದ ಮಂಗಳವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿ ಆಗಿದ್ದ ಅಂಬಿಗರ ಚೌಡಯ್ಯನವರು, ಸತ್ಯದ ಪ್ರತಿಪಾದಕರಾಗಿ ಯಾವುದೇ ಅಸಮಾನತೆಯ ವಿಷಯಗಳ ವಿರುದ್ಧ ನೇರವಾಗಿ ಹೇಳುವ ದೂರದೃಷ್ಟಿ ವಚನಕಾರರಾಗಿದ್ದರು. ಎಲ್ಲ ಶರಣರ ವಚನಗಳ ಸಂದೇಶಗಳು ಸಾರ್ವಕಾಲಿಕವಾಗಿವೆ ಎಂದರು.
ನಿಂಗಪ್ಪ ಸುಣಗಾರ, ಚಂದ್ರಪ್ಪ ಯತ್ನಹಳ್ಳಿ, ಮರಿಯಪ್ಪ ಅಂಬಿಗೇರ, ಪರಮೇಶಣ್ಣ ಕಟ್ಟೇಕಾರ, ಶಶಿ ಸುಣಗಾರ, ಕಿರಣ ಸುಣಗಾರ, ಹುಚ್ಚಪ್ಪ ಸುಣಗಾರ, ಸಚ್ಚಿನ ಸುಣಗಾರ, ನಾಗರಾಜ ಮಳ್ಳಳ್ಳಿ, ಲಕ್ಷ್ಮಣ ಬಂಡಿ ಇತರರು ಇದ್ದರು.
ಸ್ಥಳೀಯ ಪಟ್ಟಣ ಪಂಚಾಯಿತಿ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು. ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ, ರವೀಂದ್ರ ಮುದಿಯಪ್ಪನವರ, ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ವಿನೂತಾ, ಪ್ರಕಾಶ ಮಲ್ಲನಗೌಡ್ರು, ನಿಖಿಲ್ ಅರ್ಕಚಾರಿ, ಅನುಪಮಾ ಸೂರ್ಯವಂಶಿ, ಸಂತೋಶ ಬಿಳಚಿ, ಅನುರಾಧಾ ಸುಣಗಾರ, ಮಂಜಪ್ಪ ಚಲವಾದಿ, ಬಸವರಾಜ ಕವಲೆತ್ತು, ಮಂಜಪ್ಪ ಸುಣಗಾರ, ವೀರೇಶ ದ್ಯಾವಕ್ಕಳವರ ಮತ್ತು ಗಂಗಾಧರ ಮಡಿವಾಳರ ಇತರರು ಇದ್ದರು.