

ನರಗುಂದ: ಬಸವ ಕೇಂದ್ರ, ಶ್ರೀಮುರುಘರಾಜೇಂದ್ರ ಪ್ರೀ ಬೋರ್ಡಿಂಗ್ ಟ್ರಸ್ಟ್ ವತಿಯಿಂದ ಪಟ್ಟಣದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಮಾ. 3ರಂದು ಸಂಜೆ 6.30ಕ್ಕೆ ಶರಣ ಸಂಗಮ ಹಾಗೂ ಲಿಂಗೈಕ್ಯ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 76ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭೈರನಹಟ್ಟಿ ಹಾಗೂ ಶಿರೋಳ ತೋಂಟದಾರ್ಯ ಶಾಖಾಮಠದ ಪೀಠಾಧಿಪತಿ ಶಾಂತಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸುವರು. ಬಸವ ಕೇಂದ್ರ ಹಾಗೂ ಶ್ರೀಮುರುಘರಾಜೇಂದ್ರ ಪ್ರಿ ಬೋರ್ಡಿಂಗ್ ಟ್ರಸ್ಟ್ ಅಧ್ಯಕ್ಷ ಚನ್ನಬಸಪ್ಪ ಕಂಠಿ ಅಧ್ಯಕ್ಷತೆ ವಹಿಸುವರು. ಶ್ರೀಮುರುಘ ರಾಜೇಂದ್ರ ಪ್ರಿ ಬೋರ್ಡಿಂಗ್ ಟ್ರಸ್ಟ್ನ ದರ್ಮದರ್ಶಿ ಸಿ.ಎಚ್. ಕೋರಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಬಿ. ಐನಾಪೂರ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಜಾಗತಿಕ ಲಿಂಗಾಯತ ಮಹಾಸಭಾ ನರಗುಂದ ತಾಲೂಕು ಅಧ್ಯಕ್ಷ ಅಪ್ಪಣಗೌಡ ನಾಯ್ಕರ, ಕನ್ನಡಪರ ಸಂಘಟನೆಗಳ ಮುಖಂಡ ಚನ್ನು ನಂದಿ, ಶರಣ ವಿ.ಎನ್. ಕೊಳ್ಳಿಯವರ, ಶಿಕ್ಷಕ ಬಿ.ಎಚ್. ಕ್ಯಾರಕೊಪ್ಪ, ಬಿ.ಸಿ. ಹನುಮಂತಗೌಡ್ರ, ಶಂಕ್ರಣ್ಣ ವಾಳದ, ಆರ್.ಬಿ. ಚಿನಿವಾಲರ ಪಾಲ್ಗೊಳ್ಳುವರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಉಪನ್ಯಾಸ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.