ಶರಣ ನೂಲಿ ಚಂದಯ್ಯ-ನಾರಾಯಣ ಗುರು ಜಯಂತಿ ಆಚರಣೆ

SHAMS SCHOOL
ವಿಜಯಪುರದ ಪ್ರತಿಷ್ಠಿತ ಶಮ್ಸ್ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ಶರಣ ನೂಲಿಚಂದಯ್ಯ ಹಾಗೂ ಬ್ರಹ್ಮರ್ಷಿ ನಾರಾಯಣ ಗುರೂಜಿ ಜಯಂತಿ ಆಚರಿಸಲಾಯಿತು. ರವಿಕುಮಾರ ಪಿ.ವಾಡಕರ ಹಾಗೂ ವಿದ್ಯಾರ್ಥಿಗಳಿದ್ದಾರೆ.
Published on

ವಿಜಯಪುರ: ಇಲ್ಲಿನ ಕೀರ್ತಿ ನಗರದ ಪ್ರತಿಷ್ಠಿತ ಶಮ್ಸ್ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶರಣ ನೂಲಿಚಂದಯ್ಯ ಹಾಗೂ ಬ್ರಹ್ಮರ್ಷಿ ನಾರಾಯಣ ಗುರೂಜಿ ಜಯಂತಿ ಆಚರಿಸಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕ ರವಿಕುಮಾರ ಪಿ.ವಾಡಕರ ಮಾತನಾಡಿ, ಶರಣ ನೂಲಿ ಚಂದಯ್ಯ ಹಾಗೂ ಬ್ರಹ್ಮರ್ಷಿ ನಾರಾಯಣ ಗುರುಗಳು ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವ ಬಿತ್ತುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಮುಂದಾದವರು. ಅವರ ವಿಚಾರಗಳನ್ನು ಎಲ್ಲರೂ ಮೈಗೂಡಿಸಿಕೊಂಡಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.

ನೂಲಿಚಂದಯ್ಯನವರು ಒಬ್ಬ ಕಾಯಕ ಜೀವಿಯಾಗಿ ಅನುಭವಮಂಟಪದಲ್ಲಿ ಭಾಗವಹಿಸಿ ಅನೇಕ ವಚನಗಳನ್ನು ರಚಿಸಿದರು. ಕಲ್ಯಾಣದಲ್ಲಿ ತಮ್ಮ ಸರಳ ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ಅದೇ ರೀತಿ ನಾರಾಯಣ ಗುರುಗಳು ಸಹ ಮೌಢ್ಯತೆಯನ್ನು ತೊಲಗಿಸಿ ವೈಚಾರಿಕ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರೆಂದರು.

ಸಹ ಶಿಕ್ಷಕ ಶಿವಗೌಡಾ ಪಾಟೀಲ ನಿರೂಪಿಸಿದರು. ಶ್ರೀನಿವಾಸ ಪಾಟೀಲ ವಂದಿಸಿದರು. ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net