

ನರಗುಂದ: ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿ ಆಯೋಜಿಸಿರುವ ಕಲಬುರಗಿ ಶರಣ ಬಸವೇಶ್ವರ ಪುರಾಣ ಮಹಾ ಮಂಗಲೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆ. 25ರಂದು ನಡೆಯಲಿವೆ. ಈರಯ್ಯ ಭೂಸನೂರಮಠ, ಮುರಳಯ್ಯ ಹಿರೇಮಠ ಹಾಗೂ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಆ. 25ರಂದು ಬೆಳಗ್ಗೆ ಶ್ರೀಶರಣ ಬಸವೇಶ್ವರ ಮೂರ್ತಿ ಹಾಗೂ ಬಸವೇಶ್ವರ ಮೂರ್ತಿಗಳಿಗೆ ಮಹಾ ರುದ್ರಾಭಿಷೇಕ ನೆರವೇರುವುದು. ಬೆಳಗ್ಗೆ 9 ಗಂಟೆಗೆ ಪೂರ್ಣಕುಂಭದೊಂದಿಗೆ ಶರಣ ಬಸವೇಶ್ವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯುವುದು. ಮಧ್ಯಾಹ್ನ 1ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಅನ್ನಪ್ರಸಾದ, ಸಂಜೆ 7ಗಂಟೆಗೆ ಧರ್ಮಸಭೆ ನಡೆಯಲಿದೆ. ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.