

ಪುತ್ತೂರು: ಶ್ರೀ ಶಾರದಾ ಭಜನಾ ಮಂದಿರ ಆಶ್ರಯದಲ್ಲಿ ೯೦ನೇ ವರ್ಷದ ನವರಾತ್ರಿ ಉತ್ಸವ ಮತ್ತು ಪುತ್ತೂರು ಶಾರದೋತ್ಸವದ ಅಂಗವಾಗಿ ಶನಿವಾರ ಸಂಜೆ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆಯಿತು.
ಬೊಳುವಾರು ವೃತ್ತದಿಂದ ಆರಂಭಗೊಂಡ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆಗೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ವಿ.ಎಸ್. ಭಟ್ ಕೇಸರಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.
ಕಲಾತಂಡಗಳು ಬೊಳುವಾರು ವೃತ್ತ, ಪ್ರಗತಿ ಆಸ್ಪತ್ರೆ, ಇನ್‌ಲ್ಯಾಂಡ್ ಮಯೂರ, ಶ್ರೀಧರ ಭಟ್ ಬ್ರದರ್ಸ್, ಅಂಚೆ ಕಚೇರಿ, ವೆಂಕಟ್ರಮಣ ದೇವಸ್ಥಾನ, ಹಳೆಯ ಸಂಜೀವ ಶೆಟ್ಟಿ ಬಳಿ, ಬಸ್ ನಿಲ್ದಾಣ, ಅರುಣ ಕಲಾ ಮಂದಿರ, ಕಲ್ಲಾರೆ, ಹರ್ಷ ಬಳಿ, ದರ್ಬೆ ವೃತ್ತದಲ್ಲಿ ಪ್ರದರ್ಶನ ನೀಡಿದವು. ಭಕ್ತರು ಮಂಗಳಾರತಿ, ಹಣ್ಣುಕಾಯಿ ಸಮರ್ಪಣೆ ಮಾಡಿದರು.
ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಡಾ. ಸುರೇಶ್ ಪುತ್ತೂರಾಯ, ಚನಿಲ ತಿಮ್ಮಪ್ಪ ಶೆಟ್ಟಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಚಿದಾನಂದ ಬೈಲಾಡಿ, ರವೀಂದ್ರನಾಥ ರೈ ಬಳ್ಳಮಜಲು, ಅಪ್ಪಯ್ಯ ಮಣಿಯಾಣಿ, ರಾಧಾಕೃಷ್ಣ ಬೋರ್ಕರ್, ಮುಳೀಕೃಷ್ಣ ಹಸಂತಡ್ಕ, ಶಿವಕುಮಾರ್ ಕಲ್ಲಿಮಾರು, ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಉಪಾಧ್ಯಕ್ಷ ಯಶವಂತ್ ಆಚಾರ್ಯ, ದಯಾನಂದ, ಜತೆ ಕಾರ್ಯದರ್ಶಿ ಸುಽರ್ ಕಲ್ಲಾರೆ, ಜಲಜಾಕ್ಷಿ ಎನ್. ಹೆಗ್ಡೆ, ಕೋಶಾಽಕಾರಿ ತಾರಾನಾಥ ಎಚ್., ಶೋಭಾಯಾತ್ರೆ ಸಂಚಾಲಕ ನವೀನ್ ಕುಲಾಲ್, ಹೊರೆಕಾಣಿಕೆ ಸಂಚಾಲಕ ರಾಜೇಶ್ ಬನ್ನೂರು ಪಾಲ್ಗೊಂಡರು.