

ಹುಬ್ಬಳ್ಳಿ: ಇಲ್ಲಿಯ ಶಿರಡಿ ನಗರದ ಸಾಯಿ ಮಂದಿರ ಆವರಣದಲ್ಲಿ ನಿರ್ಮಿಸಲಾಗಿರುವ ಶಿರಡಿ ಮಾದರಿಯ ದ್ವಾರಕಾಮಾಯಿ ಕಟ್ಟಡದ ಲೋಕಾರ್ಪಣೆ ಸೆ. 9 ಹಾಗೂ 10ರಂದು ಜರುಗಲಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಮಹಾಮಂಡಳದ ಅಧ್ಯಕ್ಷ ವಿಶ್ವನಾಥ ತ್ರಿಮಲ್ಲೆ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಡಿಯ ವಿನ್ಯಾಸವನ್ನು ಮಾದರಿಯಾಗಿಟ್ಟುಕೊಂಡು ಕಳೆದ ನಾಲ್ಕು ವರ್ಷಗಳ ಹಿಂದೆ ಕೈಗೊಂಡ ಕಟ್ಟಡ ನಿರ್ಮಾಣ ಕಾಮಗಾರಿ ಇದೀಗ ರ್ಪೂಣಗೊಂಡಿದೆ. ಮೂವತ್ತು ವರ್ಷಗಳಿಂದ ಶಿರಡಿನಗರದಲ್ಲಿ ಸಾಯಿನಾಥರಿಗೆ ನಿರಂತರ ಪೂಜೆ ಧಾಮಿರ್ಕ ವಿಧಾನಗಳನ್ನು ನಡೆಸುತ್ತ ಬರಲಾಗಿದೆ. ಪ್ರತಿ ಗುರುವಾರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಸೆ. 9ಂದು ಮಧ್ಯಾಹ್ನ 2.30ಕ್ಕೆ ಬಾಬಾರ ಪರಮಭಕ್ತರು ಹಾಗೂ ಖಂಡೋಬಾ ದೇವಸ್ಥಾನ ಅರ್ಚಕರಾದ ಭಗತ ಮಹಾಳಸಾಪತಿ ಇವರ ಮನೆಯಲ್ಲಿ ಇರುವ ಶ್ರೀ ಸಾಯಿನಾಥರಿಂದ ಪಾವನಗೊಂಡ ಕನಿ ಹಾಗೂ ಪಾದುಕೆಗಳು ಹುಬ್ಬಳ್ಳಿಗೆ ಆಗಮಿಸಲಿವೆ.
ಭವ್ಯ ಸ್ವಾಗತ ಮೆರವಣಿಗೆಯು ಶಿರಡಿನಗರ ಗಣಪತಿ ದೇವಸ್ಥಾನದಿಂದ ಮಂದಿರದವರೆಗೆ ನಡೆಯಲಿದೆ. ವಾರಕರಿ ಮಂಡಳಿ ಅಧ್ಯಕ್ಷ ಮಹಾದೇವ ಸುಲಾಖೆ ಅವರ ನೇತೃತ್ವದಲ್ಲಿ ಹರಿನಾಮ ಸಂಕೀರ್ತನೆ ಹಾಗೂ ಮಂಗಲವಾದ್ಯಗಳೊಂದಿಗೆ ಪೂರ್ಣ ಕುಂಭ ಮೇಳದೊಂದಿಗೆ ಸ್ವಾಗತಿಸಲಾಗುವುದು. ಸಂಜೆ 4ರಿಂದ ಪಾದುಕೆ ಹಾಗೂ ಕಫನಿ ದರ್ಶನ ನಡೆಯಲಿದೆ.
ಸೆ. 10ರಂದು ಬೆಳಗ್ಗೆ 11ಕ್ಕೆ ದ್ವಾರಕಾಮಾಯಿ ಲೋಕಾರ್ಪಣೆ ನಡೆಯಲಿದ್ದು, ಬೆಳ್ಳಿ ಕವಚದ ಮುಖ್ಯ ಮಂಟಪ ಹಾಗೂ ಚರಣ ಕಮಲಗಳು ಮತ್ತು ಶ್ರೀ ಸಾಯಿನಾಥರು ದ್ವಾರಕಾಮಾಯಿಯಲ್ಲಿ ವಿರಾಜಮಾನರಾಗಿ ಕುಳಿತಿರುವ ತೈಲಚಿತ್ರದ ಅನಾವರಣ ಜರುಗಲಿದೆ.