ಅ.8ರಿಂದ ಮಂಗಳೂರು ಶ್ರೀ ಶಾರದಾ ಮಹೋತ್ಸವ

ssssssssssss
Published on


ಮಂಗಳೂರು : ನಗರದ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯರ ಮಠ ವಠಾರದಲ್ಲಿರುವ ವಸಂತ ಮಂಟಪದಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅ. 8ರಿಂದ 14ರವರೆಗೆ ನಡೆಯಲಿದೆ.
ಅ. 8ರಂದು ಶಾರದಾ ಮಾತೆಯ ವಿಗ್ರಹವನ್ನು ರಾಜಾಂಗಣದಿಂದ ಶ್ರೀ ಉಮಾ ಮಹೇಶ್ವರ ದೇವಳ ರಸ್ತೆ, ರಾಮಮಂದಿರ, ನಂದಾದೀಪ ರಸ್ತೆ, ಹೂ ಮಾರುಕಟ್ಟೆ ರಸ್ತೆ, ರಥಬೀದಿಯಾಗಿ ಉತ್ಸವ ಸ್ಥಾನಕ್ಕೆ ತರಲಾಗುವುದು. ಅ. 9ರಂದು ಬೆಳಗ್ಗೆ 7ಕ್ಕೆ ವಿಗ್ರಹ
ಪ್ರತಿಷ್ಠಾಪನೆ ನೆರವೇರಲಿದೆ ಎಂದು ವೆಂಕಟರಮಣ ದೇವಸ್ಥಾನದ ತಂತ್ರಿಗಳಾದ ಡಾ. ಪಂಡಿತ್ ನರಸಿಂಹಾಚಾರ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ. 13ರಂದು ದೀಪಾಂಲಕಾರ ಸಹಿತ ರಂಗಪೂಜೆ ನಡೆಯಲಿದೆ. ಪ್ರತೀ ದಿನ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಶ್ರೀ ಶಾರದಾ ಮಾತೆಯ ದರ್ಶನ ಪಡೆಯಬಹುದು. ಅ. 13ರಂದು ಕಾಳಿಕಾ ದೇವಿಯ ವಿಶೇಷ ಅಲಂಕಾರ ಹಾಗೂ ಬೆಳಗ್ಗೆ 10ಕ್ಕೆ ವಿದ್ಯಾರಂಭ
ಕಾರ್ಯಕ್ರಮ ನಡೆಯಲಿದೆ. ಅ. 14ರಂದು ಸಾಯಂಕಾಲ 5ಕ್ಕೆ ಶ್ರೀ ಶಾರದಾ ಮಾತೆಗೆ ಪೂರ್ಣಾಲಂಕಾರ ಹಾಗೂ ರಾತ್ರಿ 8ಕ್ಕೆ ಶಾರದಾ ಮಾತೆಯ ಶೋಭಾ ಯಾತ್ರೆ ನಡೆಯಲಿದೆ. ಉತ್ಸವ ಸ್ಥಾನದಿಂದ ಹೊರಡುವ ಶೋಭಾಯಾತ್ರೆ ಶ್ರೀ ಮಹಾಮಾಯಿ ದೇವಾಲಯವಾಗಿ, ಕೆನರಾ ಹೈಸ್ಕೂಲ್‌ನಿಂದ ನ್ಯೂಚಿತ್ರಾ ಟಾಕೀಸ್, ಬಸವನಗುಡಿ, ಚಾಮರಗಲ್ಲಿ, ರಥ ಬೀದಿಯಾಗಿ ಶ್ರೀ ಮಹಾಮಾಯಿ ತೀರ್ಥದಲ್ಲಿ ಸಮಾಪನಗೊಳ್ಳಲಿದೆ. ಅ. 10ಎಂದಯ ರಾತ್ರಿ 8ಕ್ಕೆ ದುರ್ಗಾ ನಮಸ್ಕಾರ ರಾತ್ರಿ 10ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ೀಶಾರದಾ ಮಾತೆಯ ಶೋಭಾ ಯಾತ್ರೆಯಲ್ಲಿ ಡಿಜೆ ಹಾಗೂ ನಾಸಿಕ್ ಬ್ಯಾಂಡ್‌ಗಳಿಗೆ ಅವಕಾಶ ನೀಡದಂತೆ ಸಮಿತಿ ನಿರ್ಧರಿಸಿದೆ ಎಂದು ಅವರು ಹೇಳಿದರು.
ಶ್ರೀ ಶಾರದಾ ಮಹೋತ್ಸವ ಸಮಿತಿಯ ಪ್ರಮುಖರಾದ ಗಣೇಶ್ ಬಾಳಿಗ, ದತ್ತಾತ್ರೇಯ ಭಟ್, ಬಾಲಕೃಷ್ಣ ಶೆಣೈ, ಸತೀಶ್ ಪ್ರಭು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net