ಅಂಡಗಿ ಗ್ರಾಪಂ: ಶಾರದಮ್ಮ, ನೀಲಮ್ಮ ಕಾರುಬಾರು

10sor2..
ಸೊರಬ ತಾಲೂಕಿನ ಅಂಡಗಿ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಕಾಂಗ್ರೆಸ್ ಪ್ರಮುಖರು ಸನ್ಮಾನಿಸಿದರು. ಎಚ್.ಗಣಪತಿ, ಅಣ್ಣಪ್ಪ ಹಾಲಘಟ್ಟ, ಕೆ.ಪಿ.ಷಣ್ಮುಖಪ್ಪ, ನಿರಂಜನಮೂರ್ತಿ ಇತರರಿದ್ದರು.
Published on

ಸೊರಬ: ತಾಲೂಕಿನ ಅಂಡಗಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಾರದಮ್ಮ ಮಿಡಿಯಪ್ಪ ಹರೂರು ಹಾಗೂ ನೀಲಮ್ಮ ಅಂಡಿಗೆ ಅವಿರೋಧವಾಗಿ ಆಯ್ಕೆಯಾದರು.

8 ಸದಸ್ಯ ಬಲದ ಗ್ರಾಪಂನಲ್ಲಿ ಎಲ್ಲ ಸದಸ್ಯರುಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಸಹಾಯಕ ನಿರ್ದೇಶಕ ಜಿ.ಮಂಜುನಾಥ ಕಾರ್ಯನಿರ್ವಹಿಸಿದರು. ಪಿಡಿಒ ಕೆ.ಆರ್ ಸಂದೀಪ್ ಸಹಕರಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಮುಖಂಡರಾದ ಸೋಮಪ್ಪ ಕಡಸೂರು, ಸದಸ್ಯರಾದ ಎ.ಎಸ್.ಹೇಮಚಂದ್ರ, ಕೆ.ಪಿ.ಷಣ್ಮುಖಪ್ಪ ನಿರಂಜನಮೂರ್ತಿ, ಶೈಲಜಾ, ನೀಲಮ್ಮ ಹಿರವಲಿ, ಶಶಿಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net