ಜ್ಞಾನ ವಿಕಾಸದ ಶಿಕ್ಷಣ ಅಗತ್ಯ, ಪ್ರಾಧ್ಯಾಪಕ ಡಾ.ಅರುಣ್ ಇಸ್ಲೂರು ಅಭಿಪ್ರಾಯ ಶಾರದಾ ವಿದ್ಯಾಲಯದಲ್ಲಿ ಸ್ಪಾರ್ಕ್ ಶಿಕ್ಷಣ ಯೋಜನೆ ಆರಂಭ

sharada
ವಿಶೇಷ ಶೈಕ್ಷಣಿಕ ತರಬೇತಿ ಯೋಜನೆ ಸ್ಪಾರ್ಕ್ ಇದರ ಉದ್ಘಾಟನಾ ಸಮಾರಂಭದಲ್ಲಿ ಪ್ರಾಧ್ಯಾಪಕ ಡಾ.ಅರುಣ್ ಇಸ್ಲೂರು , ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮುಂತಾದವರು ಉಪಸ್ಥಿತರಿದ್ದರು.
Published on

ಮಂಗಳೂರು: ಮಕ್ಕಳಿಗೆ ಬಾಲ್ಯದಿಂದಲೇ ಕ್ರಮಬದ್ಧ ಹಾಗೂ ಜ್ಞಾನ ವಿಕಾಸದ ಶಿಕ್ಷಣ ಅಗತ್ಯವಿದೆ ಎಂದುಎನ್‌ಐಟಿಕೆಯ ಸಂಶೋಧನೆ ಹಾಗೂ ಭೋಧನಾ ಮಾರ್ಗದರ್ಶಿ ಪ್ರಾಧ್ಯಾಪಕ ಡಾ.ಅರುಣ್ ಇಸ್ಲೂರು ಅಭಿಪ್ರಾಯಪಟ್ಟರು.

ಕೊಡಿಯಾಲಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದೊಂದಿಗೆ ಅನುಷ್ಠಾನಗೊಳ್ಳಲಿರುವ ವಿದ್ಯಾಲಯದ ವಿಶೇಷ ಶೈಕ್ಷಣಿಕ ತರಬೇತಿ ಯೋಜನೆ ಸ್ಪಾರ್ಕ್(ಶಾರದಾ ಪ್ರೋಗ್ರಾಂ ಫಾರ್ ಎನಾಲಿಟಿಕಲ್ ಆಂಡ್ ರಿಯಾಲಿಸ್ಟಿಕ್ ನಾಲೆಡ್ಜ್)ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ತೀರ್ವ ಪೈಪೋಟಿಯ ವಾತಾವರಣವಿದೆ. ಹೆಚ್ಚಿನ ಜ್ಞಾನ, ಪ್ರತಿಭೆ, ಕ್ಷಮತೆ ಇದ್ದವರಿಗಷ್ಟೇ ಉತ್ತಮ ಯಶಸ್ಸು ಮತ್ತು ಅವಕಾಶ ಲಭಿಸುವುದು. ನಮ್ಮ ರಾಜ್ಯದ ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದರೂ ಸೂಕ್ತ ಮಾರ್ಗದರ್ಶನ, ತರಬೇತಿ ಕೊರತೆಯಿಂದ ಅವರ ನಿರ್ವಹಣೆ ತೃಪ್ತಿಕರವಾಗಿಲ್ಲ ಎಂದರು.

ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಸ್ಪಾರ್ಕ್ ಶಿಕ್ಷಣ ಯೋಜನೆಯ ಬಗ್ಗೆ ಸಹಾಯಕ ಪ್ರಾಂಶುಪಾಲೆ ಲಕ್ಷ್ಮೀ ಪೈ ಈ ವಿವರಣೆ ನೀಡಿದರು. ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ನಿರ್ದೇಶಕ ಸಮೀರ್ ಪುರಾಣಿಕ್, ಹಿರಿಯ ಪ್ರಾಂಶುಪಾಲೆ ಸುನೀತಾ ವಿ. ಮಡಿ, ಶಾರದಾ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ನಾಕ್ ಉಪಸ್ಥಿತರಿದ್ದರು. ಉಪ-ಪ್ರಾಂಶುಪಾಲೆ ಲಕ್ಷ್ಮಿ ಉಡುಪ ಸ್ವಾಗತಿಸಿ, ದಯಾನಂದ ಕಟೀಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net