ಶಾರದಾ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

sssssssss
Published on



ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕ ದಿನಾಚರಣೆ ಅಂಗವಾಗಿ
ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಡಿ.ನಾರಾಯಣ ಭಟ್ (ನಿವೃತ್ತ ಮುಖ್ಯ ಶಿಕ್ಷಕರು, ರಾಮಕುಂಜೇಶ್ವರ ಅನುದಾನಿತ ಸಂಸ್ಕೃತ ಹಿ. ಪ್ರಾ. ಶಾಲೆ, ರಾಮಕುಂಜ) ಮತ್ತು ಕೆ.ಆರ್.ಗಂಗಾಧರ್ (ನಿವೃತ್ತ ಪ್ರಾಂಶುಪಾಲರು, ನೆಹರು ಮೆಮೋರಿಯಲ್ ಪ. ಪೂ. ಕಾಲೇಜು, ಅರಂತೋಡು) ಇವರುಗಳನ್ನು ಸನ್ಮಾನಿಸಲಾಯಿತು.
ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡ ಡಿ.ನಾರಾಯಣ ಭಟ್ ‘ಕೇವಲ ಪುಸ್ತಕದಲ್ಲಿ ಇರುವ ಸಂಗತಿಗಳನ್ನಷ್ಟೇ ಹೇಳಿದರೆ ಸಾಲದು. ವಿದ್ಯಾರ್ಥಿಗಳಿಗೆ ಪ್ರೇರಣೆ ಕೊಡುವ ವಿಷಯಗಳನ್ನು ಪಾಠದ ಜತೆಗೆ ಕಲಿಸುತ್ತಾ ಅವರ ಮನದಲ್ಲಿ
ನೆಲೆಯೂರುವಂತಾಗಬೇಕು ಎಂದರು.
ಕೆ. ಆರ್. ಗಂಗಾಧರ್ ಇನ್ನೊಬ್ಬರಿಗೆ ಪ್ರೇರಣೆ ಉಂಟು ಮಾಡಲು ನಾವು ಮೊದಲು ಪ್ರೇರಣೆ ಪಡೆಯಬೇಕು.ಶಿಕ್ಷಕರು ಶಾಲೆಯ ಚಟುವಟಿಕೆಗಳಿಗೆ ಮತ್ತು ವೃತ್ತಿಗೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದರು.
ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರದೀಪ ಕುಮಾರ ಕಲ್ಕೂರ , ವಿಶ್ವಸ್ಥ ಸುಧಾಕರ ರಾವ್ ಪೇಜಾವರ, ಎಸ್.ಕೆ.ಡಿ.ಬಿ. ಅಸೋಸಿಯೇಶನ್‌ನ ಅಧ್ಯಕ್ಷ ಪ್ರಭಾಕರ ರಾವ್ ಪೇಜಾವರ, ಕೋಶಾಧಿಕಾರಿ ರಾಮಕೃಷ್ಣ ರಾವ್, ಶಾರದಾ ವಿದ್ಯಾ ಸಂಸ್ಥೆಗಳ ಆಡಳಿತ ನಿರ್ದೇಶಕ ಸಮೀರ್ ಪುರಾಣಿಕ್ ಉಪಸ್ಥಿತರಿದ್ದರು.
ಶಾರದಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಮಹಾಬಲೇಶ್ವರ ಭಟ್ ಸ್ವಾಗತಿಸಿ, ಶಾರದಾ ವಿದ್ಯಾನಿಕೇತನ ಸ್ಕೂಲಿನ ಪ್ರಾಂಶುಪಾಲ ಮೋಹನದಾಸ್ ವಂದಿಸಿದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net