ಶಾರದಾ ರಾಮರಾವ್ ಚಾರಿಟೇಬಲ್ ಟ್ರಸ್ಟ್ ಗಣೇಶ ಗೋವು ನಿಲಯಕ್ಕೆ ನೆರವು

mng--19 sep sharada trust
Published on

ಮಂಗಳೂರು: ಶಾರದಾ ರಾಮರಾವ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಶಕ್ತಿನಗರದ ಗಣೇಶ ಗೋವು ನಿಲಯಕ್ಕೆ ಭೇಟಿ ಕೊಟ್ಟು ಸಹಾಯ ಹಸ್ತದ ಮೂಲಕ ಗೋವುಗಳಿಗೆ ಬೇಕಾದ ಪರಿಕರಗಳು ಹಾಗೂ 6 ತಿಂಗಳಿಗೆ ಬೇಕಾಗುವಷ್ಟು ಪಶುಮೇಧ ಮತ್ತು ಆಹಾರವನ್ನು ಹಸ್ತಾಂತರಿಸಿದರು.


ಟ್ರಸ್ಟ್ ಅಧ್ಯಕ್ಷ ಪಿ.ರವೀಂದ್ರರಾವ್ ಮಾತನಾಡಿ, ಈ ಗೋವು ಆಶ್ರಯದಲ್ಲಿ ಸುಮಾರು 20ರಷ್ಟು ಪಶುಗಳಿದ್ದು ಎಲ್ಲಾ ಸ್ವದೇಶಿ ತಳಿಗಳಾಗಿವೆ. ಗಣೇಶ ಎಂಬವರು ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿದ್ದು ಸಜ್ಜನ, ಸರಳ ಹಾಗೂ ಪರೋಪಕಾರಿಯಾಗಿದ್ದು ತನ್ನ ದುಡಿಮೆಯಲ್ಲಿ ಬಂದ ಆದಾಯವನ್ನು ಈ ಗೋವು ಆಶ್ರಮಕ್ಕೆ ವಿನಿಯೋಗಿಸಿಕೊಳ್ಳುತ್ತಿದ್ದಾರೆ. ಗೋವಿನಲ್ಲಿ ಸಾಕ್ಷಾತ್ ಭಗವಂತನನ್ನು ಕಾಣುವುದರಿಂದ ಕೋಟಿ ದೇವತೆಗಳು ಗೋವಿನಲ್ಲಿ ಇದ್ದಾರೆ ಎನ್ನುವ ನಂಬಿಕೆ ಇದೆ ಎಂದರು.


ಟ್ರಸ್ಟಿ ಸುರೇಂದ್ರರಾವ್ ಮಾತಾನಾಡಿ, ತಮ್ಮ ಬಾಲ್ಯ ಜೀವನದಲ್ಲಿ ಮನೆಯಲ್ಲಿದ್ದ ಗೋವು ಮತ್ತು ಅದರ ಕರುಗಳೊಡನೆ ಆಟವಾಡುತ್ತಿದ್ದ ಸನ್ನಿವೇಶವನ್ನು ಸ್ಮರಿಸಿ, ಗೋವಿನ ಮಹತ್ವವನ್ನು ವಿವರಿಸಿ, ಗಣೇಶಗೋವು ನಿಲಯಕ್ಕೆ ಶುಭ ಹಾರೈಸಿದರು.


ಟ್ರಸ್ಟಿಗಳಾದ ಪಿ.ವಸಂತಿರಾವ್, ಶುಭರಾವ್, ಉಷಾ ರಾವ್, ಹಾಗೂ ಪಿ.ಬಿ. ರಾವ್, ಕಾರ್ತಿಕ್ ರಾವ್ ಸಹಕರಿಸಿದರು. ಗಣೇಶರವರು ಸ್ವಾಗತಿಸಿ, ಶೋಭಾರಾವ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net