ಮಕ್ಕಳಿಂದಲೇ ಮನೆ ಮನೆಯಲ್ಲಿ ಶಾರದಾ ಪೂಜೆ: ಕೊಲದ 600 ಪುಟಾಣಿಗಳಿಂದ ವಿಧಿವಿಧಾನ

pooje
Published on

ಕಡಬ: ದ.ಕ. ಮತ್ತು ಕೊಡಗು ಜಿಲ್ಲಾ ದೇವಾಲಯಗಳ ಸಂವರ್ಧನಾ ಸಮಿತಿಯ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ಹಿಂದು ಧಾರ್ಮಿಕ ವಿದ್ಯಾರ್ಥಿಗಳು ದ.ಕ. ಜಿಲ್ಲೆಯ ವಿವಿಧ ಬಾಲ ಸಂಸ್ಕಾರ ಕೇಂದ್ರಗಳ ಸಹಕಾರದೊಂದಿಗೆ ಶನಿವಾರ ದೇವರ ಎದುರು ಪುಸ್ತಕಗಳನ್ನಿಟ್ಟು ಶಾರದಾ ಪೂಜೆ ನಡೆಸಿದರು.

ಕಳೆದ ವರ್ಷ ಕೊಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಶಾರದಾ ಪೂಜೆ ನಡೆಸುವಂತೆ ವಿನಂತಿಸಿಕೊಂಡಿದ್ದರು. ಅಂತೆಯೇ ಗ್ರಾಮದಲ್ಲಿ ಮಕ್ಕಳಿಂದ ಶಾರದಾ ಪೂಜೆ ನಡೆಯಿತು. ಈ ಬಾರಿ ದೇವಾಲಯಗಳ ಸಂವರ್ಧನಾ ಸಮಿತಿ ದ.ಕ. ಮತ್ತು ಕೊಡಗು ಜಿಲ್ಲೆಗೆ ವಿಸ್ತರಿಸಿದರು.

ವಿದ್ಯಾರ್ಥಿಗಳು ಮನೆಯ ದೇವರ ಕೋಣೆಯಲ್ಲಿ ಧಾರ್ಮಿಕ ಪುಸ್ತಕಗಳು, ಪಠ್ಯ ಪುಸ್ತಕಗಳನ್ನಿಟ್ಟು ಹೂ, ತುಳಸಿ, ಕುಂಕುಮ, ಅಕ್ಷತೆ ಇಟ್ಟು ಆರತಿ ಎತ್ತಿ ಪೂಜೆ ವಾಡಿದ್ದಾರೆ. ಈ ಬಾರಿಯೂ ಕೊಲ ಗ್ರಾಮದ ಸುವಾರು 600 ಮನೆಗಳಲ್ಲಿ ಮಕ್ಕಳು ಶಾರದಾ ಪೂಜೆ ನಡೆಸಿದರು. ಯದುಶ್ರೀ ಆನೆಗುಂಡಿ, ಆತೂರು ದೇಗುಲ ವ್ಯವಸ್ಥಾಪನಾ ಸಮಿತಿ ವಾಜಿ ಅಧ್ಯಕ್ಷರು. ದ.ಕ. ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸುವಾರು 5 ಸಾವಿರ ಮಕ್ಕಳು ಪೂಜೆಯಲ್ಲಿ ತೊಡಗಿಸಕೊಳ್ಳಬೇಕೆಂದು ಸಂಕಲ್ಪ ತೊಡಲಾಗಿತ್ತು. ಬಹುತೇಕ ಯಶಸ್ಸು ಕಂಡಿದ್ದೇವೆ. ಕೇಶವ ಪ್ರಸಾದ್ ಮುಳಿಯ, ಸಂವರ್ಧನಾ ಸಮಿತಿ ವಿಭಾಗ ಪ್ರಮುಖ್ https://www.vijayavani.net/accomplishment-by-writing-national-anthem-in-rice https://www.vijayavani.net/book-launch-program

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net