

ಕಿಕ್ಕೇರಿ: ಪಟ್ಟಣದ ಲೇ. ನಾರಾಯಣ ಜೋಯಿಸ್ ಬೀದಿಯ ಅರ್ಚಕ ಪ್ರಸಾದ್ ಕುಟುಂಬದವರು ಶರನ್ನವರಾತ್ರಿ ಪ್ರಯುಕ್ತ ಶುಕ್ರವಾರ ಶಾರದಾ ಪೂಜೆ ಹಮ್ಮಿಕೊಂಡಿದ್ದರು.
ಪೂಜೆಯಲ್ಲಿ ಮಕ್ಕಳಿಗೆ ಪುಸ್ತಕ, ಲೇಖನಿ ಸಾಮಗ್ರಿ ವಿತರಿಸಿ ಮಾತನಾಡಿ, ಸರಸ್ವತಿ ದೇವಿ ಮೂಲಾ ನಕ್ಷತ್ರದಲ್ಲಿ ಜನಿಸಿದ ದಿನವಾಗಿದೆ. ಶಾರದಾ ಪೂಜೆ ಭಕ್ತಿಯಿಂದ ಮಾಡುವುದರಿಂದ ಸುಲಭವಾಗಿ ಜ್ಞಾನ ವೃದ್ಧಿಸಲಿದೆ ಎಂದರು. ನವರಾತ್ರಿ ದಸರಾ ಬೊಂಬೆ ಮಹಿಮೆ ತಿಳಿಸಿ ಮಕ್ಕಳಿಗೆ ಲೇಖನಿ ಸಾಮಗ್ರಿ ವಿತರಿಸಿ ಶುಭ ಹಾರೈಸಿದರು. ಅರ್ಚಕ ಅಯ್ಯನಕೊಪ್ಪಲು ಸೀತಾರಾಮು ಹಾಜರಿದ್ದರು.