ದೇವರಗದ್ದೆ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ

shobhayathre
Published on

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ದೇವರಗದ್ದೆಯ ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ ಮತ್ತು ಅಂಗನವಾಡಿ ಕೇಂದ್ರ ದೇವರಗದ್ದೆ ಆಶ್ರಯದಲ್ಲಿ 23ನೇ ವರ್ಷದ ಶಾರದೋತ್ಸವದಲ್ಲಿ ಪೂಜಿತ ಶಾರದಾ ಮಾತೆಯ ಶೋಭಾಯಾತ್ರೆ ನಡೆಯಿತು.

ದೇವರಗದ್ದೆಯಿಂದ ದೇವಳದ ರಥಬೀದಿ ತನಕ ನೆರವೇರಿದ ಮೆರವಣಿಗೆ ಬಳಿಕ ಕಾಶಿಕಟ್ಟೆ ತನಕ ಸಾಗಿ ಅಲ್ಲಿಂದ ರುದ್ರಪಾದ ತನಕ ನಡೆಯಿತು. ನಂತರ ರುದ್ರಪಾದದ ದರ್ಪಣತೀರ್ಥ ನದಿಯಲ್ಲಿ ಜಲಸ್ತಂಭನ ನೆರವೇರಿತು. ಮೆರವಣಿಗೆಯ ಸಾಗುವ ವೇಳೆ ಶ್ರೀ ಶಾರದಾ ಮಾತೆಗೆ ಭಕ್ತರು ಅಲ್ಲಲ್ಲಿ ಹಣ್ಣುಕಾಯಿ ಮತ್ತು ಆರತಿ ಎತ್ತಿ ಪ್ರಸಾದ ಸ್ವೀಕರಿಸಿದರು. ಬ್ಯಾಂಡ್, ತಾಸೆ, ಪೂರ್ಣಕುಂಭ, ಹುಲಿವೇಷ, ಶಾರ್ದೂಲ ವೇಷ, ಗೊಂಬೆಗಳು, ಕುಣಿತ ಭಜನೆ ಶೋಭಾಯಾತ್ರೆಯ ಆಕರ್ಷಣೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net