ಉತ್ಸವಗಳಿಂದ ಸವಾಜಕ್ಕೆ ಉತ್ತಮ ಸಂದೇಶ: ದಯಾನಂದ ಕತ್ತಲ್‌ಸಾರ್ ಅಭಿಪ್ರಾಯ

shenoi
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಅಖಂಡ ಭಾರತಕ್ಕೆ ಶಕ್ತಿಯಾಗಿರುವ ಶಾರದೆಯ ಆರಾಧನೆ ಮೂಲಕ ನಾವು ಸಂಘಟಿತರಾಗುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳ ಮೂಲಕ ಸವಾಜಕ್ಕೆ ಒಂದು ಉತ್ತಮ ಸಂದೇಶ ಸಾರುವ ಉದ್ದೇಶ ಹೊಂದಬೇಕು. ಒಂದು ಜಾತಿ ಅಥವಾ ಒಂದು ಪಕ್ಷಕ್ಕೆ ಶಾರದೆ, ಗಣೇಶೋತ್ಸವ ಶೋಭೆಯಲ್ಲ. ಪಕ್ಷದಲ್ಲಿರುವಾಗ ಪಕ್ಷ ಸದಸ್ಯರಾಗಿ ಸವಾಜಕ್ಕೆ ಬಂದಾಗ ದೇಶದ ಪ್ರಜೆಯಾಗಿ ಕೆಲಸ ವಾಡಬೇಕು ಎಂದು ವಾಮಂಜೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹೇಳಿದರು.

ವಾಮಂಜೂರಿನ ಶ್ರೀ ರಕ್ತೇಶ್ವರಿ ಮತ್ತು ಪಂಚದೇವತಾ ಸಾನ್ನಿಧ್ಯ ಹಾಗೂ ವಾಮಂಜೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 3ನೇ ವರ್ಷದ ವಾಮಂಜೂರು ಶಾರದಾ ಮಹೋತ್ಸವದ 4ನೇ ದಿನದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.

ಸಮಿತಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಅಧ್ಯಕ್ಷತೆ ವಹಿಸಿ ವಾತನಾಡಿ, ಹಿಂದು ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಒಗ್ಗಟ್ಟಿನ ಕೊರತೆಯ ಜತೆಗೆ ಗುಂಪುಗಾರಿಕೆ ಕಂಡುಬರುತ್ತಿದೆ. ಮುಂದಿನ ವರ್ಷ ಇನ್ನೂ ಹೆಚ್ಚು ಸಂಘ- ಸಂಸ್ಥೆಗಳ ಕೂಡುವಿಕೆಯಲ್ಲಿ ವಾಮಂಜೂರು ಶಾರದಾ ಮಹೋತ್ಸವ ಅದ್ದೂರಿಯಿಂದ ನಡೆಯಲಿದೆ. ಎಲ್ಲರ ಒಗ್ಗೂಡುವಿಕೆ ಮುಖ್ಯ ಎಂದರು.

ವಾಜಿ ಮೇಯರ್ ಕವಿತಾ ಸನಿಲ್, ರಾಜ್ಯ ಧಾರ್ಮಿಕ ಪರಿಷತ್ತಿನ ವಾಜಿ ಸದಸ್ಯ ಪದ್ಮನಾಭ ಕೋಟ್ಯಾನ್ ಮತ್ತು ಬಂದಲೆ ಪಚ್ಚನಾಡಿ ಶ್ರೀ ಕ್ಷೇತ್ರ ಬಂದಲೆಯ ಧರ್ಮದರ್ಶಿ ಸತೀಶ್ ಬಂದಲೆ ಶಾರದೋತ್ಸವದ ಮಹತ್ವದ ಬಗ್ಗೆ ವಾತನಾಡಿದರು.

ಕೆಎಸ್ಸಾರ್ಟಿಸಿಯ ವಿದ್ಯಾ ಗಣಪತಿ ರಿಕ್ಷಾ ಸ್ಟಾೃಂಡ್‌ನ ಆಟೋ ರಿಕ್ಷಾ ಚಾಲಕ ಶ್ರೀನಿವಾಸ ಶೆಣೈ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ರಾಜೇಶ್ ಸುವರ್ಣ ಗುರುಪುರ, ಪಿಡಬ್ಲುೃಡಿ ಗುತ್ತಿಗೆದಾರ ಶ್ರೀನಿವಾಸ ಸುವರ್ಣ ಮಲ್ಲೂರು, ಬಾಲಕೃಷ್ಣ ಕುಕ್ಯಾನ್, ರಾಜೇಂದ್ರ ಬೈತುರ್ಲಿ, ಬಿಪಿನ್ ವಾಮಂಜೂರು, ನಟರಾಜ ಪಚ್ಚನಾಡಿ, ಕಿರಣ್ ಪಚ್ಚನಾಡಿ, ಭಾಸ್ಕರ ಅಚ್ಚುಕೋಡಿ, ಬಾಲಕೃಷ್ಣ ತೊಪೆಕಲ್, ನಾಗೇಶ್ ಕೋಟ್ಯಾನ್, ರಮೇಶ್ ಕೋಟ್ಯಾನ್ ಮತ್ತಿತರರಿದ್ದರು.

ಸುವಾ ಪ್ರಾರ್ಥನೆಗೈದರು. ದೇವದಾಸ್ ಉಳಾಯಿಬೆಟ್ಟು ಸ್ವಾಗತಿಸಿದರು. ಉಮೇಶ್ ಕೋಟ್ಯಾನ್ ನಿರೂಪಿಸಿದರು. ಬಳಿಕ ಮಹಾಪೂಜೆ, ಸ್ಥಳೀಯ ಮಕ್ಕಳಿಂದ ನೃತ್ಯ ಹಾಗೂ ವಿಧಾತ್ರಿ ಕಲಾವಿದೆರ್ ಕೈಕಂಬ ಕುಡ್ಲ ಅವರಿಂದ (ವಿಜಯಕುವಾರ್ ಕೊಡಿಯಾಲಬೈಲ್ ಸಹಕಾರ) ‘ದೈವರಾಜೆ ಶ್ರೀ ಬಬ್ಬು ಸ್ವಾಮಿ’ ತುಳು ನಾಟಕ ಪ್ರದರ್ಶನಗೊಂಡಿತು. ಭಾನುವಾರ ವಾಮಂಜೂರು ಮಂಗಳಜ್ಯೋತಿ ಪರಾರಿ ಮೂಲಕ ಶೋಭಾಯಾತ್ರೆಯಲ್ಲಿ ಸಾಗಿ ಶಾರದಾ ವಾತೆಯ ವಿಗ್ರಹವನ್ನು ಗುರುಪುರ ಫಲ್ಗುಣಿ ನದಿಯಲ್ಲಿ ವಿಸರ್ಜಿಸಲಾಯಿತು.

ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಮತ್ತು ಅಧಿಕಾರಿ ಮಟ್ಟದಲ್ಲಿ ತಾತ್ಸಾರವೇ ತುಳು ಭಾಷೆಯ ಇಂದಿನ ಸ್ಥಿತಿಗೆ ಕಾರಣ. ಆದರೆ ‘ತುಳುವಪ್ಪೆನ’ ಮಕ್ಕಳೆಲ್ಲ ತುಳು ಭಾಷೆಗಾಗಿ ಬಿಡದೆ ಧ್ವನಿ ಎತ್ತಿದರೆ ವಿಳಂಬವಾದರೂ ವಾನ್ಯತೆ ಸಿಗಲಿದೆ ಎಂಬ ನಂಬಿಕೆ ನನಗಿದೆ. ಅದಕ್ಕಾಗಿ ತುಳುವರು ಸಂಟಿತರಾಗಬೇಕು. ದಯಾನಂದ ಕತ್ತಲ್‌ಸಾರ್, ನಿಕಟಪೂರ್ವ ಅಧ್ಯಕ್ಷರು, ವಾಮಂಜೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net