ತಡಕೋಡದಲ್ಲಿ ಶಾರದಾದೇವಿ ಜಯಂತ್ಯುತ್ಸವ

UPBR SHARADA JAYANTI
Published on

ಉಪ್ಪಿನಬೆಟಗೇರಿ: ಸಮೀಪದ ತಡಕೋಡ ಗ್ರಾಮದ ಶ್ರೀ ಶಾರದಾ ಮಾತಾ ಪಬ್ಲಿಕ್ ಶಾಲೆಯಲ್ಲಿ ಶ್ರೀ ಶಾರದಾದೇವಿ ಅವರ 172ನೇ ಜಯಂತ್ಯುತ್ಸವ ಜ.3ರಂದು ಬೆಳಗ್ಗೆ 10.30 ಗಂಟೆಗೆ ಜರುಗಲಿದೆ.

ಸಾಮೂಹಿಕ ಕುಂಕುಮಾರ್ಚನೆ, ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಬಳಿಕ ತಂದೆ-ತಾಯಿಯರ ಪಾದಪೂಜೆ ನಡೆಯಲಿದೆ.

ಹುಬ್ಬಳ್ಳಿಯ ಶ್ರೀಮಾತಾ ಆಶ್ರಮದ ತೇಜೋಮಯಿ ಮಾತಾಜಿ ಸಾನ್ನಿಧ್ಯ ವಹಿಸುವರು.

ಕೆಎಂಎಫ್ ನಿರ್ದೇಶಕಿ ಶಿವಲೀಲಾ ಕುಲಕರ್ಣಿ, ಎಪಿಎಂಸಿ ಮಾಜಿ ಸದಸ್ಯೆ ಪಾರ್ವತಿ ಮಹಾದೇವ ದಂಡಿನ ಪಾಲ್ಗೊಳ್ಳುವರು ಎಂದು ಶಾಲೆಯ ಮುಖ್ಯ ಗುರು ಲಕ್ಷ್ಮೀ ಮಾತಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net