ಕ್ರೆಡೈ ಜಿಲ್ಲಾಧ್ಯಕ್ಷರಾಗಿ ಶರದ್ ರೋಡಗಿ ಆಯ್ಕೆ

Sharad Rodagi elected as CREDAI District President
ಶರದ ರೋಡಗಿ
Published on

ವಿಜಯಪುರ: ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಸಂಘಗಳ ಒಕ್ಕೂಟದ (ಕ್ರೆಡೈ) ವಿಜಯಪುರ ಜಿಲ್ಲೆಯ ಅಧ್ಯಕ್ಷರಾಗಿ ಉದ್ಯಮಿ ಶರದ್ ರೋಡಗಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ನಗರದ ಲಿಂಗದಗುಡಿ ರಸ್ತೆಯಲ್ಲಿರುವ ಸಂಘದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಮಹಾವೀರ ಪಾರೇಖ ಮುಂದಿನ ಎರಡು ವರ್ಷದ ಅವಧಿಗೆ ಸಂಘದ ಪದಾಧಿಕಾರಿಗಳ ಆಯ್ಕೆ ಕುರಿತು ಸಭೆಗೆ ಪ್ರಸ್ತಾಪಿಸುವ ಮೂಲಕ ಸದಸ್ಯರ ಅನುಮತಿ ಪಡೆದು ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.

ಜೊತೆಗೆ ಸಂಘದ ಉಪಾಧ್ಯಕ್ಷರಾಗಿ ವಾಹಿದ ಮಣಿಯಾರ, ಕಾರ್ಯದರ್ಶಿಯಾಗಿ ವಿನಯ ರುಣವಾಲ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಸಚಿನ ಬೊಂಬಲೆ ಅವರನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಶರದ್ ರೋಡಗಿ ಮಾತನಾಡಿ, ಮುಂಬರುವ ದಿನಗಳಲ್ಲಿ ಕ್ರೆಡೈ ಸಂಸ್ಥೆ ಸಮಾಜಮುಖಿ ಕಾರ್ಯ ನಿರ್ವಹಿಸಲು ಬದ್ಧವಾಗಿದೆ. ಜಿಲ್ಲೆಯಲ್ಲಿ ಭೂ ಅಭಿವೃದ್ಧಿಗಾಗಿ ಯೋಜನಾ ಬದ್ಧ ಹಾಗೂ ಸಮಗ್ರ ಬೆಳವಣಿಗೆ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಮಾರ್ಗದರ್ಶನದಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿ ಮತ್ತು ಗುಂಟಾ ನಿವೇಶನಗಳ ಬೆಳವಣಿಗೆ ನಿಲ್ಲಿಸುವ ದೃಷ್ಟಿಯಿಂದ ಅವರ ಕೈ ಬಲ ಪಡಿಸುವುದಾಗಿ ತಿಳಿಸಿ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಧನ್ಯವಾದ ತಿಳಿಸಿದರು.

ಅನುಪಮ ರುಣವಾಲ, ರಾಜೇಂದ್ರ ರುಣವಾಲ, ಟಪಾಲ ಇಂಜಿನಿಯರ್, ಅನೀಲ ಅವಳೆ, ಇರ್ಫಾನ್ ಪಠಾಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net