

ಹುಬ್ಬಳ್ಳಿ: ಬೆಳಗಾವಿಯಲ್ಲಿ ಅಕ್ಟೋಬರ್ 3ರಂದು ನಡೆಯಲಿರುವ ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಸಮಾವೇಶಕ್ಕೆ ಧಾರವಾಡ ಜಿಲ್ಲೆಯಿಂದ 10 ಸಾವಿರ ಕುರುಬ ಸಮಾಜದ ಜನರು ತೆರಳಲಿದ್ದಾರೆ ಎಂದು ಧಾರವಾಡ ಜಿಲ್ಲಾ ಸಂಚಾಲಕ ಶಿವಾನಂದ ಮುತ್ತಣ್ಣವರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ಸಂಟನಾತ್ಮಕ ಸಭೆಗಳು ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯಲಿವೆ. ಸೆ. 29ರಂದು ಸಂಜೆ 4ಕ್ಕೆ ನವಲಗುಂದದ ಕನಕ ಕಲ್ಯಾಣ ಮಂಟಪದಲ್ಲಿ ಪ್ರದೇಶ ಕುರುಬರ ಸಂದ ಅಧ್ಯಕ್ಷ ಯೋಗೇಶ್ವರ ಗೊಲ್ಲನಾಯ್ಕರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸೆ. 30ರಂದು ಕುಂದಗೋಳ ತಾಲೂಕಿನ ಸಭೆಯು ಕುಂದಗೋಳದ ಶ್ರೀ ಶಿವಾನಂದಸ್ವಾಮಿ ವಿದ್ಯಾಪಿಠದಲ್ಲಿ ನಡೆಯಲಿದೆ. ಅಂದು ಸಂಜೆ 4ಕ್ಕೆ ಹುಬ್ಬಳ್ಳಿಯ ಸ್ವಾತಿ ಹೋಟೆಲ್ನಲ್ಲಿ ಹುಬ್ಬಳ್ಳಿ ಧಾರವಾಡ ಪ್ರದೇಶ ಕುರುಬರ ಸಂದ ಸಭೆ ನಡೆಯಲಿದೆ. ಜಿಲ್ಲಾ ಅಧ್ಯೆ ಯಲ್ಲಮ್ಮ ನಾಯ್ಕರ್ ಅಧ್ಯಕ್ಷತೆ ವಹಿಸುವರು ಎಂದರು.
ಅಕ್ಟೋಬರ್ 1ರಂದು ಬೆಳಗ್ಗೆ 11ಕ್ಕೆ ಕಲಟಗಿಯ ಹನ್ನೇರಡು ಮಠದಲ್ಲಿ ಪ್ರದೇಶ ಕುರುಬರ ಸಂದ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಧಾರವಾಡ ಜಿಲ್ಲೆಯ ಉಪ ಸಂಚಾಲಕ ಫೀರಾಜಿ ಖಂಡೇಕರ ಗೋಷ್ಠಿಯಲ್ಲಿದ್ದರು.