ಜೆಡಿಎಸ್ ಸೇರಿದ ಶಾಂತಿಪುರ ಜವರೇಗೌಡ

7 HDK 1
ಎಚ್‌ಡಿ ಕೋಟೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಂತಿಪುರ ಎನ್.ಟಿ. ಜವರೇಗೌಡ ಅವರನ್ನು ಜೆಡಿಎಸ್‌ಗೆ ಬರಮಡಿಕೊಳ್ಳಲಾಯಿತು.
Published on

ಎಚ್.ಡಿ.ಕೋಟೆ: ಬಿಜೆಪಿ ಮುಖಂಡ ಶಾಂತಿಪುರದ ಎನ್.ಟಿ.ಜವರೇಗೌಡ ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ರಾಜೇಂದ್ರ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾದರು.

ಪಟ್ಟಣದಲ್ಲಿ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಜೆಡಿಎಸ್ ಸೇರಿದರು. ಇವರೊಂದಿಗೆ ಪುಟ್ಟಚನ್ನಮ್ಮ, ಸಿಗರಾಜು, ಶಿವಣ್ಣೇಗೌಡ, ರಾಜಣ್ಣ ಸೇರಿದಂತೆ ಹಲವರು ಪಕ್ಷ ಸೇರ್ಪಡೆಯಾದರು.

ಜೆಡಿಎಸ್‌ನ ಸರಗೂರು ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಮುಖಂಡರಾದ ನರಸಿಂಹಗೌಡ, ನಿಂಗೇಗೌಡ, ಪಟೇಲ್ ರಾಜೇಗೌಡ, ಕೃಷ್ಣಾಪುರ ಶಿವಕುಮಾರ್, ಜಿ.ಬಿ.ಸರಗೂರು ಮಾದೇಗೌಡ, ಬೈರೇಗೌಡ, ಶಿವರಾಜಗೌಡ, ಮಹೇಶ್ ಗೌಡ, ನಾಗೇಗೌಡ, ಮಹೇಂದ್ರ, ದೇವರಾಜೇಗೌಡ, ಹೆಬ್ಬಳ ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net