

ಹೆಬ್ರಿ: ನಮ್ಮ ಕರ್ತವ್ಯ ನಿಷ್ಠೆಯಿಂದ ಮಾಡಿದಾಗ ನಿಜವಾದ ಸ್ವಾತಂತ್ರೃಕ್ಕೆ ಅರ್ಥ ಬರುತ್ತದೆ. ದೇಶದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಭಾಗವಹಿಸೋಣ ಎಂದು ಹೆಬ್ರಿ ಮೆಸ್ಕಾಂ ಜೂನಿಯರ್ ಇಂಜಿನಿಯರ್ ಲಕ್ಷ್ಮೀಶ್ ಹೇಳಿದರು.
ಶಾಂತಿನಿಕೇತನ ಯುವವೃಂದ ಕುಡಿಬೈಲು ಕುಚ್ಚೂರು ವತಿಯಿಂದ ನಡೆದ ಸ್ವಾತಂತ್ರೊೃೀತ್ಸವದಲ್ಲಿ ಮಾತನಾಡಿದರು. ಶಾಂತಿನಿಕೇತನ ಅಧ್ಯಕ್ಷ ದೀಕ್ಷಿತ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಯಕರ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್, ಗೌರವಾಧ್ಯಕ್ಷೆ ಕಲಾವತಿ, ಆಡಳಿತ ಮಂಡಳಿ ಸದಸ್ಯರಾದ ರಾಜಶ್ರೀ, ನಾಗರಾಜ್, ಕೆ.ಗಣೇಶ್, ರಾಘವೇಂದ್ರ, ನರೇಂದ್ರ ವಿನೋದ, ದಿನೇಶ್, ವಿದ್ಯಾರ್ಥಿ ಘಟಕ ಸದಸ್ಯರು ಉಪಸ್ಥಿತರಿದ್ದರು.