

ವಿಜಯಪುರ : ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ 2024&25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ/ ಬಾಲಕಿಯರ ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ೇತ್ರ ಶಿಕ್ಷಣಾಧಿಕಾರಿಗಳ ಹಾಗೂ ೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ನಡೆದ ಕ್ರೀಡಾಕೂಟದಲ್ಲಿ ಶಾಲೆಯ 14 ವರ್ಷ ವಯೋಮಾನದ ಬಾಲಕಿಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ವೈಭವಿ ಹುಟಗಿ, ಸ್ನೇಹಶ್ರೀ ಬಿರಾದಾರ, ತನ್ವಿ ಬೋಸಲೆ, ಸೃಷ್ಟಿ ಸೋನಿ ಪ್ರಥಮ ಸ್ಥಾನ ಮತ್ತು 17 ವರ್ಷದ ವಯೋಮಾನದ ಒಳಗಿನ ಬಾಲಕಿಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ವೈಷ್ಣವಿ ಚೌಧರಿ, ಲಕ್ಷಿ$್ಮ ಉತ್ನಾಳ, ಆಧ್ಯಾ ನಾವಿ, ಸಹನಾ ತುಪ್ಪದ, ಅನನ್ಯ ಆಲೂರ ಪ್ರಥಮ ಸ್ಥಾನ ಹಾಗೂ 14 ವರ್ಷದ ವಯೋಮಾನದ ಒಳಗಿನ ಬಾಲಕರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಆಯಾನ್ ಹುಲ್ಲೂರ, ಸಮರ್ಥ ಕಲ್ಮಡಿ, ಪ್ರಜ್ವಲ ಚವ್ಹಾಣ, ಅಖಿಲೇಷ ಸೂರ್ಯವಂಶಿ, ಜಯ ಪಾಟಿದಾರ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯೆ ಶೀಲಾ ಬಿರಾದಾರ, ಚೇರ್ಮನ್ ಡಾ. ಸುರೇಶ ಬಿರಾದಾರ, ನಿರ್ದೇಶಕಿಯಾದ ದಿವ್ಯಾ ಬಿರಾದಾರ, ಪ್ರಾಚಾರ್ಯ ಶ್ರೀಧರ ಕುರಬೇಟ, ದೈಹಿಕ ಶಿಕ್ಷಕ ಎ.ಎಚ್. ಸಗರ, ಕಿರಣ ರಾಠೋಡ, ಪ್ರವಿಣ ಗೆಣ್ಣೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.