

ಹುಬ್ಬಳ್ಳಿ: ಇಲ್ಲಿಯ ಘಂಟಿಕೇರಿಯ ಎಸ್ ಜೆಆರ್ ವಿಪಿ ಮಂಡಳದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಅನ್ನು ಮಂಗಳವಾರ ಉದ್ಘಾಟಿಸಲಾಯಿತು.
ರೋಟರಿ ಕ್ಲಬ್ ಮಿಡ್ಟೌನ್ ಮಾಜಿ ಅಧ್ಯಕ್ಷ ಸುಮೇರ ಓಸ್ವಾಲ್ ಅವರು, ವಿದ್ಯಾರ್ಥಿ ಅಧ್ಯಕ್ಷ ಮೋಕ್ಷ ಜೈನ್, ವಿದ್ಯಾಥಿರ್ನಿ ಕಾರ್ಯದರ್ಶಿ ಹಿಮಾಂಶು ಜೈನ್ ಅವರಿಗೆ ಬ್ಯಾಡ್ಜ್ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ಆಯ್ಕೆಯಾದ ಎಲ್ಲ ವಿದ್ಯಾಥಿರ್ಗಳಿಗೂ ಬ್ಯಾಡ್ಜ್ ನೀಡಲಾಯಿತು.
ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾಥಿರ್ಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ಓದಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವ ಇಚ್ಚೆಯಿಂದ ಓದಿನ ಕಡೆ ಗಮನ ಕೊಡಬೇಕು ಎಂದು ಸುಮೇರ ಓಸ್ವಾಲ್ ಹೇಳಿದರು.
ಶಾಂತಿನಿಕೇತನ ಶಾಲೆಯ ಅಧ್ಯಕ್ಷ ಭವರಲಾಲ್ ಸಿ. ಜೈನ್ ಮಾತನಾಡಿ, ಕ್ಲಬ್ ಪದಾಧಿಕಾರಿಗಳಾಗಿ ಆಯ್ಕೆಯಾದ ವಿದ್ಯಾಥಿರ್ಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ. ಕ್ಯಾಥರಿನ್ ದಿನೇಶ ಮಾತನಾಡಿ, ಇಂಟರ್ಯಾಕ್ಟ್ ಕ್ಲಬ್ ವಿದ್ಯಾಥಿರ್ಗಳು ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳುತ್ತ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದರು.
ರೋಟರಿ ಕ್ಲಬ್ ಮಿಡ್ಟೌನ್ ಅಧ್ಯಕ್ಷ ರಾಜು ದೊಡ್ಡಮನಿ ಮಾತನಾಡಿದರು.
ರೋಟರಿ ಕ್ಲಬ್ ಮಿಡ್ಟೌನ್ ಕೋಶಾಧ್ಯಕ್ಷ ಪ್ರವಿಣ ಬನಸಾಲಿ, ಯೂಥ್ ಸವಿರ್ಸ್ ನಿರ್ದೇಶಕ ಡಿ. ಇಮ್ಯಾನುಯೆಲ್, ಇತರರು ಉಪಸ್ಥಿತರಿದ್ದರು.