ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲು, ಡಾ. ಆನಂದ ಪಾಂಡುರಂಗಿ ಹೇಳಿಕೆ

IMG-20230816-WA0008-1.jpg
Published on

ಹುಬ್ಬಳ್ಳಿ: ಇಲ್ಲಿಯ ಎಸ್ ಜೆಆರ್ ವಿಪಿ ಮಂಡಳದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಪಾರಿವಾಳ ಹಾಗೂ ಕೇಸರಿ ಬಿಳಿ ಹಸಿರು ಬಣ್ಣದ ಬಲೂನ್ಗಳನ್ನು ಹಾರಿ ಬಿಡುವ ಮೂಲಕ ಗಮನ ಸೆಳೆಯಲಾಯಿತು.

ಅತಿಥಿಯಾಗಿದ್ದ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಮಾತನಾಡಿ, ಅನೇಕ ಮಹನೀಯರ ತ್ಯಾಗ ಬಲಿದಾನದ ಲವಾಗಿ ಸ್ವಾತಂತ್ರ್ಯ ಲಭಿಸಿದೆ. ನಾವೆಲ್ಲ ಭಾರತೀಯರೆಂಬ ಹೆಮ್ಮೆ ಇರಬೇಕು. ದೇಶಕ್ಕಾಗಿ ದುಡಿಯಬೇಕು. ತಾಯಿ ಹಾಗೂ ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲಾದದು ಎಂದರು.

ಉದ್ಯಮಿ ಕಾಂತಿಲಾಲ ಕೇವಲಚಂದಜೀ ಮಾತನಾಡಿ, ಅನುದಿನವೂ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡಬೇಕು ಎಂದರು.

ಶಾಲೆಯ ಅಧ್ಯಕ್ಷ ಭವರಲಾಲ್ ಸಿ. ಜೈನ್ ಮಾತನಾಡಿ, ಭಾರತದ ಪ್ರಜೆಗಳಾದ ನಾವೆಲ್ಲರೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಸನ್ನದ್ಧರಾಗಬೇಕು ಎಂದರು.

ಕೋಶಾಧಿಕಾರಿ ಪುರಣಕುಮಾರ ನಹಾಟಾ, ಜಂಟಿ ಕಾರ್ಯದಶಿರ್ ಭರತ ಬಿ. ಜೈನ್, ಜಯಂತಿಲಾಲ್ ಕಟಾರಿಯಾ, ನಿರ್ದೇಶಕರಾದ ಪ್ರವೇಶ್ ಕೊಠಾರಿ, ದಾನೇಶಕುಮಾರ ಕಟಾರಿಯಾ, ಪ್ರಾಚಾರ್ಯ ಡಾ. ಕ್ಯಾಥರಿನ್ ದಿನೇಶ, ಇತರರು ಇದ್ದರು.

ವಿದ್ಯಾಥಿರ್ಗಳಿಂದ ಪಥ ಸಂಚಲನ, ದೇಶಭಕ್ತಿ ನೃತ್ಯಗಳು ನಡೆದವು. ಮುಖೇಶ ಕೊಠಾರಿ ಅವರು ತಂದೆ ಮಿಲಾಪ ಚಂದಜೀ ಕೊಠಾರಿ ಅವರ ಸ್ಮರಣಾರ್ಥ ಸಿಹಿ ಹಂಚಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net