ಸಂಸ್ಥೆ ಬೆಳೆದಾಗ ಅಭಿವೃದ್ಧಿ ಸಾಧ್ಯ

sabhe
Published on

ಹೆಬ್ರಿ: ಕರೋನ ಸಂಕಷ್ಟ ಪರಿಸ್ಥಿತಿಯಲ್ಲಿ ಡಾಂಬರು ರಸ್ತೆ ಕಾಣದ ಕುಡಿಬೈಲಿನಲ್ಲಿ ಹಣಕಾಸಿನ ಸೇವೆ ಸಲ್ಲಿಸುವ ಸಲುವಾಗಿ ಹುಟ್ಟಿಕೊಂಡ ಶಾಂತಿನಿಕೇತನ ಸೌಹಾರ್ದ ಸಹಕಾರಿ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿ ಐದನೇ ವರ್ಷಕ್ಕೆ ಪದಾರ್ಪಣೆಗೊಂಡಿದೆ. ಸಂಸ್ಥೆ ಬೆಳೆದಾಗ ಶೇರುದಾರರಿಗೆ, ಠೇವಣಿದಾರರಿಗೆ, ಸದಸ್ಯರಿಗೆ, ಸಿಬ್ಬಂದಿಗೆ ಅನುಕೂಲವಾಗುತ್ತದೆ. ಎಲ್ಲರೂ ಕೈಜೋಡಿಸಿದಾಗ ದೊಡ್ಡ ಯಶಸ್ಸು ಸಾಧ್ಯ ಎಂದು ಸಹಕಾರಿ ಅಧ್ಯಕ್ಷ ರಾಜೇಶ್ ಹೇಳಿದರು.

ಶಾಂತಿನಿಕೇತನ ಸೌಹಾರ್ದ ಸಹಕಾರಿಯ ಸಂಘ ಕುಡಿಬೈಲು ಕುಚ್ಚೂರು ಸಂಸ್ಥಾಪನ ದಿನಾಚರಣೆ ಅಂಗವಾಗಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸಂಸ್ಥೆ ಹುಟ್ಟುಹಾಕುವುದು ಸವಾಲಿನ ಕೆಲಸ. ಅದನ್ನು ಯಶಸ್ವಿಯಾಗಿ ಮುನ್ನೆಸುವುದು ದೊಡ್ಡ ಸವಾಲು. ಎಲ್ಲರು ಸಹಕಾರ ನೀಡಿದ್ದರಿಂದ ಉತ್ತಮವಾಗಿ ಬೆಳೆಯಲು ಸಾಧ್ಯವಾಯಿತು. ಮುಂದೆಯೂ ನಿಮ್ಮ ಸಹಕಾರ ಇನ್ನೂ ಹೆಚ್ಚಿನ ರೀತಿಯಲ್ಲಿ ನೀಡಿ ಎಂದು ಮನವಿ ಮಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಎಸ್., ವ್ಯವಸ್ಥಾಪಕಿ ರಾಜೇಶ್ರೀ, ರಾಘವೇಂದ್ರ, ಜಗನ್ನಾಥ, ಪ್ರವೀಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net